ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್, ಭೈರತಿ ಸುರೇಶ್ ರಿಯಲ್ ಎಸ್ಟೇಟ್ ಏಜೆಂಟ್ ಎಂದು ಹೇಳಿಕೆ ನೀಡಿದ್ದು, ಸುರೇಶ್ ವಾಪಾಸ್ ಉತ್ತರ ನೀಡಿದ್ದಾರೆ.
ಯಾರ್ರಿ ಅವನು ವಿಶ್ವನಾಥ್ , ರಿಯಲ್ ಎಸ್ಟೇಟ್ ಒಂದು ಉದ್ಯಮ ಅಲ್ವಾ? ಅವ್ನು, ಅವನ ಮಗ ನನ್ನ ಮನೆಗೆ ಸೈಟು ಕೇಳಿಕೊಂಡು ಬಂದಿದ್ದ ಫೋಟೋ ಇದೆ. ಅವನು ಏಕವಚನ ಬಳಸಿದ್ರೆ, ನನಗೂ ಅದರಪ್ಪನಂಗೆ ಮಾತಾಡೋಕೆ ಬರುತ್ತೆ ಎಂದಿದ್ದಾರೆ.
ನಾನು ಹಳ್ಳಿಯಲ್ಲೇ ಹುಟ್ಟಿ ಬೆಳೆದಿರೋದು, ಅದರಪ್ಪನಂಗೆ ಮಾತಾಡ್ತಾನಿ. ಮೊದಲು ಮರ್ಯಾದೆ ಕೊಟ್ಟು, ಮರ್ಯಾದೆ ತೆಗೆದುಕೊಳ್ಳಲಿ. ವಿಶ್ವನಾಥ್ ತರ ನಾನು ರೋಲ್ ಕಾಲ್ ಗಿರಾಕಿ ಅಲ್ಲ. ವಯಸ್ಸಾಗಿದೆ ಅಂತ ಅಷ್ಟೇ ಬೆಲೆ ಕೊಡ್ತೀವಿ ಅದನ್ನ ಉಳಿಸಿ ಕೊಳ್ಳಲಿ ಎಂದು ಎಚ್ಚರಿಕೆ ನೀಡಿದ್ದಾರೆ.