24 ವರ್ಷಗಳ ಬಳಿಕ ಉತ್ತರ ಕೊರಿಯಾಕ್ಕೆ ಭೇಟಿ: ಕಿಮ್ ಗೆ ಆರೋಸ್ ಲಿಮೊಸಿನ್ ಉಡುಗೊರೆಯಾಗಿ ನೀಡಿದ ಪುಟಿನ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಬರೋಬ್ಬರಿ 24 ವರ್ಷಗಳ ಬಳಿಕ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉತ್ತರ ಕೊರಿಯಾಗೆ ಭೇಟಿ ನೀಡಿದ್ದು, ಈ ವೇಳೆ ಉಭಯ ರಾಷ್ಟ್ರಗಳ ಕಾರ್ಯತಂತ್ರಗಳಲ್ಲಿ ಪ್ರಗತಿ ಸಾಧಿಸಿದ ಸಂಕೇತವಾಗಿ ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್ ಅವರಿಗೆ ವಿಲಾಸಿ ಆರೊಸ್‌ ಲಿಮೊಸಿನ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

ಈ ಸಂದರ್ಭ ಎರಡೂ ದೇಶಗಳ ಮೇಲೆ ವೈರಿಗಳು ದಾಳಿ ನಡೆಸಿದರೆ ಪರಸ್ಪರ ಸಹಕಾರ ನೀಡುವ ವಾಗ್ದಾನವನ್ನು ಉಭಯ ರಾಷ್ಟ್ರಗಳ ನಾಯಕರು ಮಾಡಿದರು.

ಪುಟಿನ್ ಹಾಗೂ ಕಿಮ್‌ ಅವರು ಪರಸ್ಪರ ಉಡುಗೊರೆಯನ್ನು ನೀಡಿದರು. ಪುಟಿನ್ ಅವರು 2ನೇ ಬಾರಿ ಕಿಮ್‌ ಅವರಿಗೆ ಕಾರು ನೀಡಿದರು. ಪುಟಿನ್‌ಗೆ ಚಹಾ ಲೋಟದ ಸೆಟ್‌ಗಳನ್ನು ಕಿಮ್‌ ಉಡುಗೊರೆಯಾಗಿ ನೀಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!