ಇತ್ತೀಚೆಗೆ ಕೆಲವರು ಎಷ್ಟೇ ನಿದ್ರೆ ಮಾಡಿದರೂ ದಣಿದಂತೆ, ಆಯಾಸಗೊಂಡಂತೆ ಭಾಸವಾಗುತ್ತಿದೆಯೆಂದು ದೂರುತ್ತಾರೆ. ಜೊತೆಗೆ ಕೈ ಕಾಲು ಮರಗಟ್ಟುವಿಕೆ, ಏನು ನಡೆಯುತ್ತಿದೆ ಎಂಬುದು ಮರೆತುಹೋಗುತ್ತಿದೆ. ಇವು ಸಾಮಾನ್ಯ ದೈನಂದಿನ ದೊಡ್ಡ ಒತ್ತಡ ಅಥವಾ ದೌರ್ಬಲ್ಯದಿಂದ ಆಗುತ್ತಿರೋದಲ್ಲ, ಇದಕ್ಕೆ ಕಾರಣವಾಗಿರಬಹುದು ವಿಟಮಿನ್ ಬಿ12 ಕೊರತೆ.
ವಿಟಮಿನ್ ಬಿ12 ದೇಹಕ್ಕೆ ಬಹಳ ಅಗತ್ಯವಾದ ಪೋಷಕಾಂಶ. ಇದು ನರಮಂಡಲದ ಆರೋಗ್ಯ, ರಕ್ತಕಣಗಳ ಉತ್ಪಾದನೆ ಹಾಗೂ ಮೆದುಳಿನ ಕ್ರಿಯೆಗಳಿಗೆ ಸಹಾಯಕವಾಗುತ್ತದೆ. ಆದರೆ ಈ ವಿಟಮಿನ್ ಕೊರತೆ ಆಗುತ್ತಿದ್ದರೆ ಅದರ ಪ್ರಭಾವ ನಿಶ್ಚಿತವಾಗಿ ದೇಹದ ವಿವಿಧ ಭಾಗಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.
ಬಹಳಷ್ಟು ಜನರಿಗೆ ಆರಂಭದಲ್ಲಿ ಸೌಮ್ಯ ಲಕ್ಷಣಗಳು ಕಾಣಿಸಿಕೊಂಡರೂ, ಸಮಯಕ್ಕಿಂತ ಮುಂಚೆ ಚಿಕಿತ್ಸೆ ನೀಡದಿದ್ದರೆ ಇದು ಗಂಭೀರ ನರವೈಜ್ಞಾನಿಕ ಸಮಸ್ಯೆಗಳಿಗೆ ಹಾಗೂ ರಕ್ತಹೀನತೆಗೆ ಕಾರಣವಾಗಬಹುದು.
- ನಿರಂತರ ದಣಿವು ಮತ್ತು ಶಕ್ತಿಯ ಕೊರತೆ – ವಿಟಮಿನ್ ಬಿ12 ಕೊರತೆಯಿಂದ ದೇಹದಲ್ಲಿ ಕೆಂಪು ರಕ್ತಕಣಗಳ ಉತ್ಪತ್ತಿ ಕಡಿಮೆಯಾಗುತ್ತದೆ, ಪರಿಣಾಮವಾಗಿ ಆಮ್ಲಜನಕ ಸರಿಯಾದ ಪ್ರಮಾಣದಲ್ಲಿ ದೇಹದ ಭಾಗಗಳಿಗೆ ತಲುಪುವುದಿಲ್ಲ. ಇದರಿಂದ ಪ್ರತಿ ದಿನವೂ ದಣಿದಂತೆ ಅನಿಸುತ್ತದೆ.
- ಕೈ-ಕಾಲುಗಳಲ್ಲಿ ಮರಗಟ್ಟುವಿಕೆ ಅಥವಾ ಜುಮ್ಮೆನಿಸುವಿಕೆ – ಇದೊಂದು ಸ್ಪಷ್ಟವಾದ ಲಕ್ಷಣವಾಗಿದ್ದು, ದೀರ್ಘಕಾಲ ಬಿ12 ಕೊರತೆ ಇದ್ದರೆ ನರಗಳಿಗೆ ಹಾನಿಯುಂಟಾಗುತ್ತದೆ.
- ಚರ್ಮದ ಬಣ್ಣದಲ್ಲಿ ಬದಲಾವಣೆ – ಕೆಲವರಿಗೆ ಚರ್ಮ ಮಸುಕಾದಂತೆ ಅಥವಾ ಪೀತ ರೋಗ (ಕಾಮಾಲೆ) ಬಂದಂತೆ ಕಾಣಿಸುತ್ತದೆ. ಇದು ಕೆಂಪು ರಕ್ತಕಣಗಳ ಅಕಾಲಿಕ ನಾಶದಿಂದ ಆಗುತ್ತದೆ.
- ಮೆದುಳಿಗೆ ಸಂಬಂಧಿಸಿದ ಲಕ್ಷಣ – ಕಂಡುಬರುವ ಸಾಧ್ಯತೆ ಇದೆ. ಸ್ಮರಣಶಕ್ತಿ ಹಿನ್ನಡೆಯಾಗುವುದು, ಮನಃಸ್ಥಿತಿ ಬದಲಾವಣೆ, ಕೇಂದ್ರೀಕರಿಸಲು ಕಷ್ಟವಾಗುವುದು ಮುಂತಾದವುಂಟಾಗಬಹುದು.
- ಬಾಯಿಯಲ್ಲೂ ಸಮಸ್ಯೆಗಳು ಕಾಣಬಹುದು – ಊದಿದ ನಾಲಿಗೆ, ಹುಣ್ಣುಗಳು ಬಿ12 ಕೊರತೆಯ ಸೂಚನೆ ಆಗಿವೆ.
- ಕೊನೆಗೆ, ಉಸಿರಾಟದಲ್ಲಿ ತೊಂದರೆ – ಶ್ವಾಸಕೋಶ ಮತ್ತು ಹೃದಯಕ್ಕೆ ಹೆಚ್ಚು ಒತ್ತಡ ಬರುವುದರಿಂದ ಉಸಿರಾಟ ತೊಂದರೆಯಾಗುತ್ತದೆ, ಇದು ಗಂಭೀರ ಹಂತವಾಗಬಹುದು.
ನೀವು ಈ ಲಕ್ಷಣಗಳಲ್ಲಿ ಯಾವುದೇ ಅನುಭವಿಸುತ್ತಿದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಸಾಮಾನ್ಯವಾದ ರಕ್ತ ಪರೀಕ್ಷೆಯ ಮೂಲಕ ವಿಟಮಿನ್ ಬಿ12 ಮಟ್ಟವನ್ನು ಪರಿಶೀಲಿಸಬಹುದಾಗಿದೆ. ಸಮಯಕ್ಕೆ ಸರಿಯಾದ ಪೂರಕ ಸೇವನೆ ಅಥವಾ ಆಹಾರದಲ್ಲಿ ಬದಲಾವಣೆ ಮಾಡಿದರೆ, ಆರೋಗ್ಯ ಪುನಃ ಸುಧಾರಿಸಬಹುದು.
ಆದರೆ ವಿಳಂಬ ಮಾಡಿದರೆ ಸಮಸ್ಯೆ ತೀವ್ರಗೊಳ್ಳುವುದು ಖಚಿತ. ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಬದಲಾವಣೆಯನ್ನೂ ಸಣ್ಣದು ಎಂದು ನಿರ್ಲಕ್ಷಿಸಬೇಡಿ.