ಹೊಸದಿಗಂತ ಡಿಜಿಟಲ್ ಡೆಸ್ಕ್:
ದೀಪಾವಳಿ (Diwali) ಹಬ್ಬದ ಕ್ಷಣ ಪ್ರಧಾನಿ ಮೋದಿ ಸ್ಥಳೀಯ ಉತ್ಪನ್ನಗಳ ತಯಾರಕರಿಗೆ ಹಾಗೂ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ನಮೋ ಆ್ಯಪ್ನಲ್ಲಿ (NaMo app) ಪ್ರಚಾರ ಅಭಿಯಾನವೊಂದನ್ನು ಘೋಷಿಸಿದ್ದಾರೆ.
ಇದರಂತೆ ದೀಪಾಳಿಗಾಗಿ ಸ್ಥಳೀಯ ಉತ್ಪನ್ನಗಳನ್ನು ಖರೀದಿಸಿ ಆ ವಸ್ತುವಿನೊಂದಿಗೆ ಅಥವಾ ಅದರ ತಯಾರಕರೊಂದಿಗೆ ಸೆಲ್ಫಿ ತೆಗೆದು ನಮೋ ಆ್ಯಪ್ನಲ್ಲಿ ಪೋಸ್ಟ್ ಮಾಡುವಂತೆ ನಾಗರಿಕರ ಬಳಿ ಮನವಿ ಮಾಡಿದ್ದಾರೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಸ್ಥಳೀಯ ಉತ್ಪನ್ನಗಳ ಬಳಕೆಗೆ ಮನವಿ ಮಾಡಿದ್ದಾರೆ.
‘ಈ ದೀಪಾವಳಿಯಲ್ಲಿ, ನಮೋ ಅಪ್ಲಿಕೇಶನ್‌ನಲ್ಲಿ #VocalForLocal ಥ್ರೆಡ್‌ಗಳೊಂದಿಗೆ ಭಾರತದ ಉದ್ಯಮಶೀಲತೆ ಮತ್ತು ಸೃಜನಶೀಲ ಮನೋಭಾವದ ಉತ್ಸಾವನ್ನು ಆಚರಿಸೋಣ. ಸ್ಥಳೀಯವಾಗಿ ತಯಾರಿಸಲಾದ ಉತ್ಪನ್ನಗಳನ್ನು ಖರೀದಿಸಿ ಮತ್ತು ನಂತರ ಉತ್ಪನ್ನ ಅಥವಾ ತಯಾರಕರೊಂದಿಗೆ ಸೆಲ್ಫಿ ತೆಗೆದು ನಮೋ ಅಪ್ಲಿಕೇಶನ್‌ನಲ್ಲಿ ಪೋಸ್ಟ್ ಮಾಡಿ. ನಿಮ್ಮ ಸಾಲಿಗೆ ಸೇರಿಕೊಳ್ಳಲು ಮತ್ತು ಸಕಾರಾತ್ಮಕ ಮನೋಭಾವವನ್ನು ಎಲ್ಲೆಡೆ ಹರಡುವಂತೆ ಮಾಡಲು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರನ್ನು ಆಹ್ವಾನಿಸಿ. ಸ್ಥಳೀಯ ಪ್ರತಿಭೆಗಳನ್ನು ಬೆಂಬಲಿಸಲು, ಭಾರತೀಯರ ಸೃಜನಶೀಲತೆಯನ್ನು ಪ್ರೋತ್ಸಾಹಿಸಲು ಮತ್ತು ನಮ್ಮ ಸಂಪ್ರದಾಯಗಳನ್ನು ಪ್ರವರ್ಧಮಾನಕ್ಕೆ ತರಲು ಡಿಜಿಟಲ್ ಮಾಧ್ಯಮದ ಶಕ್ತಿಯನ್ನು ಬಳಸೋಣ’ ಎಂದು ಮೋದಿ ಸಂದೇಶ ನೀಡಿದ್ದಾರೆ.
https://twitter.com/narendramodi/status/1722131667853451750?ref_src=twsrc%5Etfw%7Ctwcamp%5Etweetembed%7Ctwterm%5E1722131667853451750%7Ctwgr%5Ea524bb4ac760c6d88dba7c2cf73040393d5a3dba%7Ctwcon%5Es1_&ref_url=https%3A%2F%2Ftv9kannada.com%2Fnational%2Fpm-modi-calls-vocal-for-local-for-diwali-asks-public-to-post-selfies-with-product-or-the-maker-on-namo-app-gsp-712125.html
ಹೀಗೆ ಸಾರ್ವಜನಿಕರು ನಮೋ ಆ್ಯಪ್ನಲ್ಲಿ ಅಪ್ಲೋಡ್ ಮಾಡಿದ ಸೆಲ್ಫಿಗಳ ಪೈಕಿ ಆಯ್ದ ಕೆಲವನ್ನು ಪ್ರಧಾನಿಯವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಿದ್ದಾರೆ.