ದಿಗಂತ ವರದಿ ಹಾವೇರಿ:
ಹಾವೇರಿ-ಗದಗ ಲೋಕಸಭಾ ಚುನಾವಣೆ ಮತ ಎಣಿಕೆ ಹಿನ್ನೆಲೆ ಅಂಚೆ ಮತಪೆಟ್ಟಿಗೆಯ ಸ್ಟ್ರಾಂಗ್ ರೂಮ್ ಓಪನ್ ಕಾರ್ಯಕ್ಕೆ ಜಿಲ್ಲಾ ಚುನಾವಣಾಧಿಕಾರಿ ರಘುನಂದನಮೂರ್ತಿ ನಿರ್ದೇಶನ ನೀಡಿದರು.
ದೇವಗಿರಿಯ ಸರಕಾರಿ ಎಂಜಿನಿಯರಿಂಗ್ ಕಾಲೇಜ್ ನಲ್ಲಿರುವ ಸ್ಟ್ರಾಂಗ್ ರೂಮ್ ಸ್ಥಾಪಿಸಲಾಗಿದ್ದು ಚುನಾವಣಾ ವೀಕ್ಷಕ ತಿತರ್ ಮರೆ ಸೂಚನೆ ಮೇರೆಗೆ ಓಪನ್ ಮಾಡಲಾಯಿತು. ಡಿಸಿ ರಘುನಂದನ್ ಮೂರ್ತಿ, ಸಿಇಓ ಅಕ್ಷಯ ಶ್ರೀಧರ್, ಹಾಗೂ ಎಸ್ಪಿ ಆಂಶು ಕುಮಾರ್ ಸಮ್ಮುಖದಲ್ಲಿ ಸ್ಟ್ರಾಂಗ್ ರೂಮ್ ಓಪನ್ ಮಾಡಲಾಯಿತು. ಈ ವೇಳೆ ವಿವಿಧ ಪಕ್ಷಗಳ ಮುಖಂಡರು ಇದ್ದರು.