ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಬಾಂಗ್ಲಾದೇಶಿಗನೊಬ್ಬ ಉದ್ದಟತನ ಮೆರೆದಿದ್ದಾನೆ. ತನ್ನ ಜೀವಂತ ತಾಯಿ ಮೃತಪಟ್ಟಿದ್ದಾಳೆ ಎಂದು ಘೋಷಿಸಿದ್ದಲ್ಲದೇ, ಇದರ ವಿಚಾರಣೆಗೆ ಬಂದ ಚುನಾವಣಾಧಿಕಾರಿಗೆ ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ.
ಖೈರುಲ್ ಕರಿಗರ್ ಎಂಬಾತನನ್ನು ಬಾಂಗ್ಲಾದೇಶಿ ಯುವಕ ಗುರುತಿಸಲಾಗಿದೆ. ಈತ ಹಲವು ವರ್ಷಗಳ ಹಿಂದೆ ಅಕ್ರಮವಾಗಿ ಭಾರತ ಪ್ರವೇಶಿಸಿ, ಇಲ್ಲಿನ ದಾಖಲೆಗಳನ್ನೂ ಅಕ್ರಮವಾಗಿ ಪಡೆದಿದ್ದಾನೆ. ಜೊತೆಗೆ ಮತದಾರರ ಪಟ್ಟಿಯಲ್ಲಿ ಸ್ಥಾನ ಪಡೆದು ಮತ ಕೂಡ ಚಲಾಯಿಸಿದ್ದಾನೆ. ಇದೀಗ, ನಡೆಯುತ್ತಿರುವ ಪರಿಷ್ಕರಣೆಯಲ್ಲಿ ಈತನ ಮೂಲ ಹೊರಬಿದ್ದಿದೆ.
ಉತ್ತರ 24 ಪರಗಣದ ಹಿಂಗಲ್‌ಗಂಜ್‌ನ ಸಾಹೇಬ್‌ಖಾಲಿ ಪಂಚಾಯತ್ ಪ್ರದೇಶದ ನಿವಾಸಿಯಾದ ಆರೋಪಿ ಖೈರುಲ್ ಕರಿಗರ್ ಎಸ್ಐಆರ್ ಫಾರ್ಮ್ನಲ್ಲಿ ತನ್ನ ತಾಯಿ ಮೃತಪಟ್ಟಿದ್ದಾಳೆ. ನೆರೆಯ ಮಹಿಳೆಯೇ ತನ್ನ ತಾಯಿ ಎಂದು ಅದರಲ್ಲಿ ನಮೂದಿಸಿದ್ದಾನೆ. ಈ ಕುರಿತು ವಿಚಾರಣೆಗಾಗಿ ಚುನಾವಣಾ ಆಯೋಗದ ಸ್ಥಳೀಯ ಅಧಿಕಾರಿಗಳಾದ ಬಿಎಲ್ಒ ನೋಟಿಸ್ ನೀಡಿದ್ದಾರೆ.
ಇದರಿಂದ ಕೆರಳಿದ ಆತ ಬಿಎಲ್ಒಗೆ ಜೀವ ಬೆದರಿಕೆ ಹಾಕಿದ್ದಾನೆ. ತನಗೆ ಆಡಳಿತರೂಢ ತೃಣಮೂಲ ಕಾಂಗ್ರೆಸ್ನ ನಾಯಕರು ಪರಿಚಿತರಿದ್ದಾರೆ ಎಂದು ಧಮ್ಕಿ ಹಾಕಿದ್ದಾನೆ ಎಂದು ಬಿಎಲ್ಒ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

