ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಲೋಕಸಭಾ ಅಭ್ಯರ್ಥಿಗಳು ವೋಟ್ ಮಾಡಿದ್ದಾರೆ.
ಎನ್ ಡಿ ಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಹೊಳೇನರಸೀಪುರ ತಾಲ್ಲೂಕಿನ ಪಡುವಲಹಿಪ್ಪೆ ಗ್ರಾಮದ ಮತಗಟ್ಟ 251 ಮತದಾನ ಕೇಂದ್ರದಲ್ಲಿ ಮತ ಚಲಾಯಿಸಿದ್ದಾರೆ. ಪ್ರಜ್ವಲ್‌ರೇವಣ್ಣ ಜೊತೆಗೆ ಅಣ್ಣ ಸೂರಜ್ ರೇವಣ್ಣ ಮತ್ತು ಅವರ ಪತ್ನಿ ಕೂಡ ಮತ ಚಲಾಯಿಸಿದ್ದಾರೆ.
ಮತಗಟ್ಟೆ ಸಂಖ್ಯೆ 176ರಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಮತದಾನ ಮಾಡಿದ್ದಾರೆ. ಮಹಾರಾಣಿ ಪ್ರಮೋದ ದೇವಿ ಹಾಗೂ ಪತ್ನಿ ತ್ರಿಶಿಕಾ ದೇವಿ ಜೊತೆ ಆಗಮಿಸಿ ಯದುವೀರ್ ಮತದಾನ ಮಾಡಿದ್ದಾರೆ. ಅಗ್ರಹಾರದ ಶ್ರೀಕಾಂತ ಶಾಲೆಯ ಮತಗಟ್ಟೆ ಸಂಖ್ಯೆ 176ರಲ್ಲಿ ಮತದಾನ ಮಾಡಿದ್ದಾರೆ. ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದಾರೆ. ಮತಗಟ್ಟೆ ಸಂಖ್ಯೆ 179ರಲ್ಲಿ ಪ್ರಮೋದ ದೇವಿ ಮತದಾನ ಮಾಡಿದ್ದಾರೆ.
ಬಿಜೆಪಿ ಅಭ್ಯರ್ಥಿ ಡಾ ಕೆ ಸುಧಾಕರ್ ಪೆರೇಸಂದ್ರ ಗ್ರಾಮದಲ್ಲಿ ಮತದಾನ ಮಾಡಿದ್ದಾರೆ. ಪತ್ನಿ ಡಾ ಪ್ರೀತಿ ಹಾಗೂ ತಂದೆ ಪಿ ಎನ್ ಕೇಶವರೆಡ್ಡಿ ಯೊಂದಿಗೆ ತೆರಳಿ ಮತದಾನ ಮಾಡಿದ್ದಾರೆ.
ಬಿಜೆಪಿ ಮಾಜಿ ಶಾಸಕ ಹಾಗೂ ಅಪೇಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಮತದಾನ ಮಾಡಿದ್ದಾರೆ. ಕಡೂರಿನಲ್ಲಿ ಬೆಳ್ಳಿ ಪ್ರಕಾಶ್ ಮತ ಚಲಾಯಿಸಿದ್ದಾರೆ. ಕಡೂರು ತಾಲೂಕಿನ ಕುಂದೂರು ಮತಗಟ್ಟೆ 252 ರಲ್ಲಿ ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ್ದಾರೆ.