ಹೊಸದಿಗಂತ ಡಿಜಿಟಲ್ ಡೆಸ್ಕ್:
ಹರಿಯಾಣ ವಿಧಾನಸಭಾ ಚುನಾವಣೆಯ ಮತದಾನಕ್ಕೂ ಮುನ್ನ ಅಧಿಕಾರಿಗಳು ಇಂದು ರಾಜ್ಯದ ವಿವಿಧ ಮತಗಟ್ಟೆಗಳಲ್ಲಿ ಅಣಕು ಮತದಾನ ನಡೆಸಿದರು.
ಕೈತಾಲ್ ವಿಧಾನಸಭಾ ಕ್ಷೇತ್ರದ ಇಂಡಸ್ ಪಬ್ಲಿಕ್ ಸ್ಕೂಲ್ ನ ಮತಗಟ್ಟೆ ಸಂಖ್ಯೆ-120ರಲ್ಲಿ ಅಣಕು ಮತದಾನ ನಡೆಯುತ್ತಿದೆ.
ಕೈತಾಲ್ ಕ್ಷೇತ್ರದಿಂದ ಕಾಂಗ್ರೆಸ್‌ನ ಆದಿತ್ಯ ಸುರ್ಜೇವಾಲಾ, ಬಿಜೆಪಿಯ ಲೀಲಾ ರಾಮ್, ಎಎಪಿಯ ಸತ್ಬೀರ್ ಸಿಂಗ್ ಗೋಯತ್ ಮತ್ತು ಜೆಜೆಪಿಯ ಸಂದೀಪ್ ಗರ್ಹಿ ಸ್ಪರ್ಧಿಸಿದ್ದಾರೆ.
ಕಾಂಗ್ರೆಸ್‌ನ ಇಂದೂರಾಜ್ ಸಿಂಗ್ ನರ್ವಾಲ್, ಜೆಜೆಪಿಯ ದೀಪಕ್ ಮಲಿಕ್, ಬಿಜೆಪಿಯ ಪರ್ದೀಪ್ ಸಿಂಗ್ ಸಾಂಗ್ವಾನ್ ಮತ್ತು ಎಎಪಿಯ ಸಂದೀಪ್ ಮಲಿಕ್ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.