2024 ರ ಲೋಕಸಭೆ ಚುನಾವಣೆಯ ಐದನೇ ಹಂತದ ಮತದಾನವು ಬಿಗಿ ಭದ್ರತೆ ಮತ್ತು ವ್ಯವಸ್ಥೆಗಳ ನಡುವೆ ಆರು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಗಳಲ್ಲಿ ಹರಡಿರುವ 49 ಸಂಸದೀಯ ಕ್ಷೇತ್ರಗಳಲ್ಲಿ ಸೋಮವಾರ ಬೆಳಿಗ್ಗೆ ಪ್ರಾರಂಭವಾಗಿದೆ.
ಮತದಾನವು ಬೆಳಗ್ಗೆ 7 ಗಂಟೆಗೆ ಪ್ರಾರಂಭವಾಯಿತು ಮತ್ತು ಸಂಜೆ 6 ಗಂಟೆಯವರೆಗೆ ಮುಂದುವರಿಯುತ್ತದೆ, ಮುಕ್ತಾಯದ ವೇಳೆಗೆ ಸರದಿಯಲ್ಲಿದ್ದವರಿಗೆ ಇನ್ನೂ ಮತದಾನ ಮಾಡಲು ಅವಕಾಶವಿದೆ.
ಭಾರತೀಯ ಚುನಾವಣಾ ಆಯೋಗದ (ಇಸಿಐ) ಪ್ರಕಾರ, ಒಡಿಶಾ ವಿಧಾನಸಭೆಯ 35 ವಿಧಾನಸಭಾ ಕ್ಷೇತ್ರಗಳಿಗೆ ಸೋಮವಾರ ಏಕಕಾಲದಲ್ಲಿ ಮತದಾನ ನಡೆಯಲಿದೆ.
ಇಸಿಐ ಪ್ರಕಾರ, 4.69 ಕೋಟಿ ಪುರುಷರು, 4.26 ಕೋಟಿ ಮಹಿಳೆಯರು ಮತ್ತು 5409 ತೃತೀಯಲಿಂಗಿ ಮತದಾರರು ಸೇರಿದಂತೆ 8.95 ಕೋಟಿ ಮತದಾರರು ಐದನೇ ಹಂತದ ಮತದಾನದಲ್ಲಿ 695 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.