ಹೊಸ ದಿಗಂತ ಡಿಜಿಟಲ್ ಡೆಸ್ಕ್:
ವಿಧಾನಸಭೆ ಚುನಾವಣೆ ಹತ್ರ ಬರುತ್ತಿದೆ. ಈ ನಡುವೆಯೇ ಮಾಜಿ ಸಚಿವ ಜನಾರ್ಧನ ರೆಡ್ಡಿ ರಾಜಕೀಯ ನಡೆ ತೀವ್ರ ಕುತೂಹಲ ಮೂಡಿಸಿದೆ.
ಗಂಗಾವತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜನಾರ್ಧನ ರೆಡ್ಡಿ, ಭಾನುವಾರ ಎಲ್ಲರೂ ಟಿವಿ ಮುಂದೆ ಕುತ್ಕೊಂಡ್ರೆ ಎಲ್ಲವೂ ಗೊತ್ತಾಗುತ್ತೆ. ರೆಡ್ಡಿ ಬಿಜೆಪಿಯಲ್ಲೇ ಇರ್ತಾರೆ ಎಂದು ಬಿಎಸ್ವೈ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ರೆಡ್ಡಿ, ಇನ್ನೆರಡು ದಿನ ಕಾಯಿರಿ ಎಲ್ಲವೂ ಗೊತ್ತಾಗುತ್ತೆ. ಭಾನುವಾರ ಎಲ್ಲರೂ ಟಿವಿ ಮುಂದೆ ಕುತ್ಕೊಂಡ್ರೆ ಎಲ್ಲವೂ ಗೊತ್ತಾಗುತ್ತೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಎಲ್ಲವನ್ನೂ ಹೇಳುತ್ತೇನೆ ಎಂದು ಹೇಳಿದರು.
ನನ್ನ ರಾಜಕೀಯ ಜೀವನದ ಬಗ್ಗೆ ಭಾನುವಾರ ಗೊತ್ತಾಗುತ್ತೆ. ಯಾರು ಏನು ಅಂದ್ರು ಅಂದೆ ಗೊತ್ತಾಗುತ್ತೆ. ಅಂದೇ ಎಲ್ಲವನ್ನ ಹೇಳುತ್ತೇನೆ. ಆವತ್ತೆ ನನ್ನ ಜೊತೆ ಯಾರು ಬರ್ತಾರೆ ಬರಲ್ವೋ ಎನ್ನುವುದು ತಿಳಿಯುತ್ತದೆ ಎಂದು ರೆಡ್ಡಿ ಸ್ಪಷ್ಟಪಡಿಸಿದರು.