ಅವರ ಜೊತೆ ಸಿನಿಮಾ ಮಾಡಲು ಕಾಯುತ್ತಿದ್ದೀನಿ: ಪ್ರಕಾಶ್ ರಾಜ್ ಹೇಳಿಕೆಗೆ ಕಿಚ್ಚ ರಿಯಾಕ್ಷನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌ ಇಂದು ಪತ್ರಿಕಾಗೋಷ್ಠಿ ನಡೆಸಿ ತಾನುಬಿಜೆಪಿಗೆ ಸೇರಲ್ಲ ಆದರೆ ಸಿಎಂ ಬೊಮ್ಮಾಯಿ ಅವರಿಗೆ ಬೆಂಬಲ ಎಂದು ಹೇಳಿದ್ದಾರೆ. ಸಿಎಂ ಹೇಳಿದರೆ ಯಾರ ಪರ ಬೇಕಾದರೂ ಪ್ರಚಾರ ಮಾಡುತ್ತೇನೆ ಎಂದು ಸುದೀಪ್ ಸ್ಪಷ್ಟಪಡಿಸಿದ್ದಾರೆ.

‘ಚಿತ್ರರಂಗದ ಕಷ್ಟದ ದಿನಗಳಲ್ಲಿ ಕೆಲವೇ ಕೆಲವರು ನನ್ನ ಪರ ನಿಂತಿದ್ದರು, ಅವರಲ್ಲಿ ನನ್ನ ಪ್ರೀತಿಯ ಮಾಮ (ಸಿಎಂ ಬೊಮ್ಮಾಯಯಿ) ಕೂಡ ಒಬ್ಬರು. ಪ್ರಾರಂಭದಿಂದನೂ ಮಾಮ ಪರಿಚಯ ನನಗೆ. ಅವರ ವ್ಯಕ್ತಿತ್ವಕ್ಕೆ ನಾನು ತಲೆಬಾಗುತ್ತೇನೆ. ಆ ವ್ಯಕ್ತಿಗೆ ನಾನು ಬೆಂಬಲ ನೀಡುತ್ತೇನೆ. ಇದು ರಾಜಕೀಯ ಎಂಟ್ರಿ ಅಲ್ಲ, ವ್ಯಕ್ತಿ ಪರ ನಿಂತಿದ್ದೀನಿ ಅಷ್ಟೆ. ಎಲ್ಲರನ್ನೂ ಮೆಚ್ಚಿಸಿಕೊಂಡು ಒಳ್ಳೆಯವನಾಗಿ ಇರಬೇಕು ಅಂದಿಂದ್ರೆ ನಾನು ಇಲ್ಲಿಗೆ ಬರ್ತಿರ್ಲಿಲ್ಲ. ಬೊಮ್ಮಾಯಿ ಯಾವುದೇ ಪಕ್ಷ ಆಗಿದ್ದರೂ ನಾನು ಅವರ ನಿಂತ್ಕೊತ್ತಿದ್ದೆ’ ಎಂದು ಸುದೀಪ್ ಹೇಳಿದ್ದಾರೆ.

ಇದೇ ವೇಳೆ ಕಿಚ್ಚ ಬಾಹುಭಾಷಾ ನಟ ಪ್ರಕಾಶ್ ರಾಜ್ ಮಾತಿಗೂ ಪ್ರತಿಕ್ರಿಯೆ ನೀಡಿದರು. ಪ್ರಕಾಶ್ ರಾಜ್ ಜೊತೆ ಸಿನಿಮಾ ಮಾಡಲು ಕಾಯುತ್ತಿದ್ದೀನಿ ಎಂದು ಹೇಳಿದ್ದಾರೆ. ‘ಪ್ರಕಾಶ್ ರಾಜ್ ಜೊತೆ ರನ್ನ ಸಿನಿಮಾ ಮಾಡಿದ್ದೇನೆ. ಅವರ ಮೇಲೆ ತುಂಬಾ ಗೌರವವಿದೆ. ಮುಂದಿನ ಸಿನಿಮಾ ಅವರ ಜೊತೆ ಮಾಡಲು ಕಾಯುತ್ತಿದ್ದೇನೆ’ ಎಂದು ಸಿನಿಮಾ ಶೈಲಿಯಲ್ಲೇ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಕಾಶ್ ರಾಜ್ ಹೇಳಿದ್ದೇನು?

ಕಿಚ್ಚನ ರಾಜಕೀಯ ಎಂಟ್ರಿ ಬಗ್ಗೆ ಪ್ರಕಾಶ್ ರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ಸುಳ್ಳು ಸುದ್ದಿ ಹರಡಿಸುತ್ತಿದೆ ಎಂದು ಹೇಳಿದ್ದಾರೆ. ಕಿಚ್ಚ ಸುದೀಪ್ ತಮ್ಮನ್ನು ತಾವು ಮಾರಿಕೊಳ್ಳುವವರು ಅಲ್ಲ ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ.

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!