ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಲಬುರಗಿಯ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಇದೇ ಜೂನ್ 23 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನೇರ ಸಂದರ್ಶನ ನಡೆಯಲಿದೆ.
ಉದ್ಯೋಗ ಮೇಳದಲ್ಲಿ ಭಾಗವಹಿಸುವ ಕಂಪನಿಗಳ ವಿವರ:
ಎಮ್.ಪಿ. ಗಾರ್ಡಿಂಗ್ ಸೊಲ್ಯೂಷನ್ ಪ್ರೈ.ಲೀ. ದಲ್ಲಿ ಟೆಕ್ನಿಷಿಯನ್ ಹುದ್ದೆಗೆ ಐಟಿಐ / ಡಿಪ್ಲೋಮಾ (ಇ ಆಂಡ್ ಇ, ಇ ಆಂಡ್ ಸಿ) ವಿದ್ಯಾರ್ಹತೆ. ವಯೋಮಿತಿ -18 ರಿಂದ 28 ವರ್ಷ.
ವಾಲ್ವಾಯ್ಲ್ ಫ್ಲೂಯ್ಡ್ ಪವರ್ಇಂಡಿಯಾ ಪ್ರೈ.ಲಿ. ದಲ್ಲಿ ಟ್ರೈನಿ ಹುದ್ದೆಗೆ ಐಟಿಐ / ಡಿಪ್ಲೋಮಾ ಪಾಸಾಗಿರಬೇಕು. ವಯೋಮಿತಿ -18 ರಿಂದ 28 ವರ್ಷ.
ನೀಡ್ಸ್ ಮ್ಯಾನ್ ಪವರ್ ಸಪೋರ್ಟ್ ಸರ್ವಿಸಸ್ ಪ್ರೈ.ಲಿ.ದಲ್ಲಿ ಟೆಕ್ನಿಷಿಯನ್ ಹುದ್ದೆಗೆ ಐಟಿಐ / ಡಿಪ್ಲೋಮಾ ಪಾಸಾಗಿರಬೇಕು. ವಯೋಮಿತಿ- 18 ರಿಂದ 28 ವರ್ಷದೊಳಗಿರಬೇಕು.
ಅಭ್ಯರ್ಥಿಗಳು ತಮ್ಮ ಎಲ್ಲಾ ಅಂಕಪಟ್ಟಿಗಳ ಝೆರಾಕ್ಸ್, ರೆಸ್ಯೂಮ್(ಬಯೋಡಟಾ) ಭಾವಚಿತ್ರಗಳು ಹಾಗೂ ಆಧಾರ್ ಕಾರ್ಡ್ನೊಂದಿಗೆ ಮೇಲ್ಕಂಡ ದಿನಾಂಕದಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು.