ಕೆಲವೊಂದು ಬಾರಿ ಚಪಾತಿ ಮಾಡಿಟ್ಟ ಸ್ವಲ್ಪ ಸಮಯದಲ್ಲೇ ರಬ್ಬರ್‌ನಂತಾಗಿ ತಿನ್ನೋಕೆ ಮನಸಾಗೋದಿಲ್ಲ, ಆದರೆ ಕೆಲವರು ಮಾಡುವ ಚಪಾತಿ ಮಧ್ಯಾಹ್ನ ಬಾಕ್ಸ್‌ಗೆ ತಂದರೂ ಸಾಫ್ಟ್ ಆಗಿಯೇ ಇರುತ್ತದೆ. ಇದು ಹೇಗೆ ಸಾಧ್ಯ? ಇಲ್ಲಿದೆ ಉತ್ತರ..
- ಚಪಾತಿ ಹಿಟ್ಟನ್ನು ಕಲಸುವಾಗ ಬಿಸಿ ನೀರಿನಲ್ಲಿ ಕಲಸಿ
- ಕಲಸುವಾಗ ಎಣ್ಣೆ ಬದಲು ತುಪ್ಪ ಹಾಕಿ
- ಕಲಸಿಟ್ಟ ನಂತರ ಹಿಟ್ಟಿಗೆ ಎಣ್ಣೆ ಸವರಿ, ತಣ್ಣೀರಿನಲ್ಲಿ ಅದ್ದಿದ ತೆಳು ಬಟ್ಟೆಯನ್ನು ಅದರ ಮೇಲೆ ಹಾಕಿ ಅರ್ಧ ಗಂಟೆ ಬಿಟ್ಟುಬಿಡಿ
- ಹೆಂಚು ಕಾದಿರಲಿ ಆದರೆ ದೊಡ್ಡ ಉರಿಯಲ್ಲಿ ಚಪಾತಿ ಬೇಯಿಸಬೇಡಿ
- ಪದೇ ಪದೆ ಚಪಾತಿಯನ್ನು ಎತ್ತಿಹಾಕಬೇಕಿ
- ಹಾಟ್‌ಬಾಕ್ಸ್‌ನಲ್ಲಿ ಅಥವಾ ಒಂದರ ಮೇಲೊಂದು ಚಪಾತಿ ಹಾಕಿದರೆ ಮೆತ್ತಗೆ ಇರುತ್ತವೆ
- ಹೆಚ್ಚು ಹಿಟ್ಟು ಬಳಸಿ ಚಪಾತಿ ಲಟ್ಟಿಸಬೇಡಿ, ಹೆಂಚಿಗೆ ಹಾಕುವಾಗ ಕೊಡವಿ ಹಾಕಿ