ಜೇನುತುಪ್ಪವನ್ನು ಮಿಸ್ ಆಗಿ ತಲೆಗೆ ತಾಗಿಸಿದರೂ ಆ ಜಾಗ ಮಾತ್ರ ಬಿಳಿಯಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಜೇನುತುಪ್ಪದ ಹೇರ್ ಪ್ಯಾಕ್ ಹಾಕಿಕೊಳ್ಳಲಾಗುತ್ತದೆ. ಇದರಿಂದ ಕೂದಲು ಬಿಳಿಯಾಗೋದಿಲ್ಲ ಎನ್ನಲಾಗುತ್ತದೆ. ಹೇಗೆ ಹಾಕಬೇಕು?
ಜೇನುತುಪ್ಪದ ಹೇರ್ ಮಾಸ್ಕ್ ಹಾಕಿಕೊಳ್ಳಲು, ಜೇನುತುಪ್ಪವನ್ನು ಆಲಿವ್ ಎಣ್ಣೆ ಅಥವಾ ತೆಂಗಿನ ಎಣ್ಣೆಯೊಂದಿಗೆ ಬೆರೆಸಿ. ಇದನ್ನು ತಲೆಗೆ ಮಾಸ್ಕ್ ಹಾಕಿಕೊಳ್ಳಬೇಕು. ನೆತ್ತಿ ಮತ್ತು ಕೂದಲಿಗೆ ಹಚ್ಚಿ, ಕೆಲವು ನಿಮಿಷಗಳ ಕಾಲ ಮಸಾಜ್ ಮಾಡಿ. 20ರಿಂದ 30 ನಿಮಿಷಗಳ ಕಾಲ ಹಾಗೆಯೇ ಬಿಡಬೇಕು.
ಇದು ಕೂದಲು ಬೇಕಾದ ಪೋಷಕಾಂಶಗಳನ್ನು ಒದಗಿಸಲು ಸಹಾಯ ಮಾಡುತ್ತದೆ. ಮಾಸ್ಕ್ ನಿಮ್ಮ ಕೂದಲಿಗೆ ಹಚ್ಚಿ ಮತ್ತು ಅರ್ಧ ಗಂಟೆಯ ನಂತರ, ಬೆಚ್ಚಗಿನ ನೀರಿನಿಂದ ನಿಮ್ಮ ಕೂದಲನ್ನು ಚೆನ್ನಾಗಿ ಸ್ವಚ್ಛಗೊಳಿಸಬೇಕು. ಶಾಂಪೂ ಹಾಕದಿರುವುದು ಒಳ್ಳೆಯದು.
ಜೇನುತುಪ್ಪದ ಹೇರ್ ಪ್ಯಾಕ್ ಅನ್ನು ನಿಯಮಿತವಾಗಿ ಹಾಕಿಕೊಳ್ಳುವುದರಿಂದ ನಿಮ್ಮ ಕೂದಲಿಗೆ ಜೇನುತುಪ್ಪದ ಗುಣಗಳು ದೊರೆಯುತ್ತವೆ. ಈ ಪ್ಯಾಕ್ನಿಂದ ಕೂದಲುಗಳು ಉದ್ದ ಹಾಗೂ ದಪ್ಪವಾಗಿ ಬೆಳೆಯುತ್ತವೆ. ಅದೇ ರೀತಿ, ಜೇನುತುಪ್ಪದಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕೂದಲು ಹಾಗೂ ನೆತ್ತಿಯನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಕೂದಲು ಆರೋಗ್ಯಕರವಾಗಿ ಹಾಗೂ ಸುಂದರವಾಗಿ ಬೆಳೆಯುತ್ತದೆ.