ಪದಾರ್ಥಗಳು:
ಬೇಬಿ ಕಾರ್ನ್: 250 ಗ್ರಾಂ
ಕಡಲೆ ಹಿಟ್ಟು: 1 ಕಪ್
ಅಕ್ಕಿ ಹಿಟ್ಟು: 1/2 ಕಪ್
ಕೆಂಪು ಮೆಣಸಿನ ಪುಡಿ: 1 ಟೀಸ್ಪೂನ್
ಅರಿಶಿನ ಪುಡಿ: 1/2 ಟೀಸ್ಪೂನ್
ಉಪ್ಪು: ರುಚಿಗೆ ತಕ್ಕಂತೆ
ನೀರು: ಅಗತ್ಯವಿರುವಷ್ಟು
ಎಣ್ಣೆ: ಕರಿಯಲು
ಮಾಡುವ ವಿಧಾನ:
ಬೇಬಿ ಕಾರ್ನ್ ಗಳನ್ನು ಉದ್ದವಾಗಿ ಕತ್ತರಿಸಿ. ಒಂದು ಬೌಲ್ ನಲ್ಲಿ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಮೆಣಸಿನ ಪುಡಿ, ಅರಿಶಿನ ಪುಡಿ, ಮತ್ತು ಉಪ್ಪು ಸೇರಿಸಿ.ಸ್ವಲ್ಪ ಸ್ವಲ್ಪ ನೀರು ಸೇರಿಸಿ ಗಟ್ಟಿಯಾದ ಹಿಟ್ಟನ್ನು ತಯಾರಿಸಿ. ಹಿಟ್ಟನ್ನು 10-15 ನಿಮಿಷಗಳ ಕಾಲ ನೆನೆಯಲು ಬಿಡಿ. ಎಣ್ಣೆಯನ್ನು ಬಾಣಲೆಯಲ್ಲಿ ಬಿಸಿ ಮಾಡಿ. ಬೇಬಿ ಕಾರ್ನ್ ಗಳನ್ನು ಹಿಟ್ಟಿನಲ್ಲಿ ಅದ್ದಿ ಬಿಸಿ ಎಣ್ಣೆಯಲ್ಲಿ ಹಾಕಿ. ಗೋಲ್ಡನ್ ಬ್ರೌನ್ ಮತ್ತು ಗರಿಗರಿಯಾಗುವವರೆಗೆ ಫ್ರೈ ಮಾಡಿದ್ರೆ ಬಜ್ಜಿ ರೆಡಿ.