ಲೈಫ್ನಲ್ಲಿ ಖುಷಿಯಾಗಿರೋದು ಅಷ್ಟೊಂದ ಕಷ್ಟ ಯಾಕೆ? ಸಿಂಪಲ್ ಆಗಿರುವ ಲೈಫ್ನ್ನು ನಾವೇ ಕಾಂಪ್ಲಿಕೇಟ್ ಮಾಡಿಕೊಳ್ತೀವಿ. ಜೀವನದಲ್ಲಿ ಘಟನೆಗಳು, ಸಂದರ್ಭಗಳು ಎದುರಾಗುತ್ತಲೇ ಇರುತ್ತವೆ. ಆದರೆ ಅದಕ್ಕೆ ನೀವು ಹೇಗೆ ರಿಯಾಕ್ಟ್ ಮಾಡ್ತೀರಿ ಅನ್ನೋದರ ಮೇಲೆ ಎಲ್ಲವೂ ನಿಂತಿದೆ..
ನಿಮಗೆ ಖುಷಿಯಾಗಿರೋಕೆ ಇಷ್ಟ ಎಂದಾದರೆ ಫಸ್ಟ್ ನಾನು ಖುಷಿಯಾಗಿರ್ತೀನಿ ಅಂತ ಡಿಸೈಡ್ ಮಾಡಿ. ಹಾಗೇ ಈ ಐದು ಸಿಂಪಲ್ ರೂಲ್ಸ್ ಫಾಲೋ ಮಾಡಿ..
1 ಯಾರನ್ನೂ ದ್ವೇಷ ಮಾಡ್ಬೇಡಿ. ಅವರು ನಿಮಗೆಷ್ಟೇ ಕಷ್ಟ ಕೊಟ್ಟಿರಲಿ. ಅವರವರ ಕರ್ಮ ಅವರನ್ನು ಬೇರೆ ಬೇರೆ ರೀತಿಯಲ್ಲಿ ಕಾಡುತ್ತದೆ. ನಿಮ್ಮ ಮನಸ್ಸನ್ನು ಗಲೀಜು ಮಾಡ್ಕೋಬೇಡಿ. ಸುಮ್ಮನೆ ಬಿಟ್ಟುಬಿಡಿ.
2 ಯಾರ ಜೊತೆಯೂ ನಿಮ್ಮ ಜೀವನವನ್ನು ಕಂಪೇರ್ ಮಾಡ್ಕೋಬೇಡಿ. ಒಂದು ಲಕ್ಷ ಸಂಬಳ ಬಂದಿದ್ರೆ ಏನು ಮಾಡ್ತಿದ್ರಿ? ಇಮ್ಯಾಜಿನ್ ಮಾಡಿ, ನಿಮ್ಮೆಲ್ಲ ಸಮಸ್ಯೆ ಮುಗಿದ ನಂತರ? ವಾಟ್ ನೆಕ್ಸ್ಟ್? ಈಗಿರುವ ಲೈಫ್ ಬೆಸ್ಟ್ ಎಂದುಕೊಳ್ಳಿ.
3 ಪಡೆದುಕೊಳ್ಳುವ ಸುಖಕ್ಕಿಂತ ಕೊಡುವುದರಲ್ಲಿ ಹೆಚ್ಚು ಸುಖ ಇದೆ ಅನ್ನೋದನ್ನು ಮರೆಯಬೇಡಿ. ಕೊಡುವ ಖುಷಿ ಪರ್ಮನೆಂಟ್, ಪಡೆದುಕೊಳ್ಳುವ ಖುಷಿ ತಾತ್ಕಾಲಿಕ ನೆನಪಿರಲಿ.
4 ಮಾಡಿರುವ ಕೆಲಸಗಳಿಗೆ, ತೆಗೆದುಕೊಂಡ ನಿರ್ಧಾರಗಳಿಗೆ ಪಶ್ಚಾತ್ತಾಪ ಬೇಡ. ಆ ಸಮಯದಲ್ಲಿ ಆಗಿದ್ದು ಆಗಿದೆ ತಪ್ಪಾಗಿದ್ದರೆ ತಿದ್ದುಕೊಂಡು ಹೋಗಿ. ಮತ್ತೆ ತಪ್ಪು ಮಾಡಬೇಡಿ, ಬಟ್ ಕೊರಗಬೇಡಿ.
5 ದುಡ್ಡು ಬೇಕೇ ಬೇಕು, ಬಟ್ ಖಾಸಗಿ ಜೀವನ ಚೆನ್ನಾಗಿಲ್ಲ ಅಂದ್ರೆ ಎಷ್ಟು ದುಡ್ಡಿದ್ರೂ ಎಲ್ಲೋ ಒಂದು ಖಾಲಿ ಜಾಗ ಮನಸ್ಸಿನಲ್ಲಿ ಇದ್ದೇ ಇರುತ್ತದೆ ನೆನಪಿಟ್ಟುಕೊಳ್ಳಿ.