ಮೇಘನಾ ಶೆಟ್ಟಿ ಶಿವಮೊಗ್ಗ
ಅದೇ ಆಫೀಸ್, ಅದೇ ಮನೆ, ಅದೇ ಅಡುಗೆ, ಅದೇ ಜವಾಬ್ದಾರಿಯಿಂದ ಬೇಸತ್ತಿದ್ದೀನಿ ಅಂತ ಅನಿಸಿದ್ರೆ ಮಿಸ್ ಮಾಡದೇ ಒಂದು ಟ್ರಿಪ್ ಮಾಡಿ. ಇದು ನಿಮಗೆ ಜೀವನದ ಉತ್ಸಾಹ ನೀಡುತ್ತದೆ. ಎಷ್ಟೋ ಮಂದಿ ರಿಲ್ಯಾಕ್ಸ್ ಆಗೋಕೆಂದು ಟ್ರಾವೆಲ್ ಮಾಡ್ತಾರೆ ಆದರೆ ಬರುಬರುತ್ತಾ ಅದೊಂದು ಬ್ಯೂಟಿಫುಲ್ ಅಡಿಕ್ಷನ್ ಆಗಿ ಬದಲಾಗುತ್ತದೆ.
ಅದರಲ್ಲಿಯೂ ಸಮುದ್ರಗಳನ್ನು ನೋಡೋದು, ಆ ಅಲೆಗೆ ಶರಣಾಗೋದರ ಕಿಕ್ ಬೇರೆಯೇ ಇದೆ. ಇನ್ಯಾರೋ ಡಿಸೈನ್ ಮಾಡಿ, ಇನ್ಯಾರೋ ಕಟ್ಟಿದ ಚಂದದ ಮನೆಗಳಿಗೆ ಹೋಗಿ ಮೂರ್ನಾಲ್ಕು ದಿನಕ್ಕೆ ಅದೇ ನಿಮ್ಮ ಮನೆಯೇನೋ ಎನ್ನುವಷ್ಟು ಪ್ರೀತಿ ಬೆಳೆಸಿಕೊಳ್ತೀರಿ. ಬೆಳಗ್ಗೆದ್ದು ಕಣ್ಬಿಟ್ಟಾಗ ಕಿವಿಗೆ ಅಲೆಗಳ ಇಂಪಾದ ನಾದ ಕೇಳುತ್ತದೆ. ಮನೆ ಬಾಗಿಲಿನಿಂದ ಒಂದೆರಡು ಹೆಜ್ಜೆ ಹೊರಗೆ ಹೋದರೆ ನೀಲಿ ಸಮುದ್ರ ಕೈ ಬೀಸಿ ಕರೆಯುತ್ತದೆ. ಇದೆಲ್ಲಾ ಪದಗಳಲ್ಲಿ ಹೇಳಬಹುದು, ಬಟ್ ಫೀಲ್ ಮಾಡಿದ್ರೆ ಡಿಫ್ರೆಂಟ್ ಆಗಿಯೇ ಇರುತ್ತದೆ.
ಸಮುದ್ರದ ಮಜ ತೆಗೆದುಕೊಳ್ಳೋಕೆ ನಮ್ಮ ರಾಜ್ಯದಲ್ಲೇ ಬೇಕಾದಷ್ಟು ಓಷನ್ಸ್ ಇದೆ. ಮಂಗಳೂರು, ಉಡುಪಿ, ಗೋಕರ್ಣ, ಮುರುಡೇಶ್ವರಕ್ಕೆ ಹೋಗಿ ಬನ್ನಿ. ಅದೆಲ್ಲವನ್ನೂ ನೋಡಿದ್ದೂ ಮತ್ತೂ ಸಮುದ್ರದ ಆಸೆ ಇದ್ದರೆ ವರ್ಕಳಕ್ಕೆ ಭೇಟಿ ನೀಡಿ.. ಇಲ್ಲಿ ಯಾವೆಲ್ಲಾ ಜಾಗ ಇದೆ? ಇಲ್ಲಿದೆ ಡೀಟೇಲ್ಸ್.. ಪದಗಳು ಸಾಕು, ಇನ್ನು ಫೋಟೊ ನೋಡಿ ಕಣ್ತುಂಬಿಕೊಳ್ಳಿ..
ವರ್ಕಳ ಕ್ಲಿಫ್
ಜನಾರ್ಧನ ಸ್ವಾಮಿ ದೇವಸ್ಥಾನ
ಬ್ಲಾಕ್ ಸ್ಯಾಂಡ್ ಬೀಚ್
ಮ್ಯಾಂಗ್ರೋವ್ ಫಾರೆಸ್ಟ್
ಕ್ಯಾನ್ ಫ್ಲೈ ಅಡ್ವೆಂಚರ್
ಒಡಾಯಂ ಬೀಚ್
ಜಟಾಯು ಅರ್ಥ್ ಸೆಂಟರ್