May 10, 2026
Sunday, May 10, 2026
spot_img

BEAUTY | ಪರ್ಫೆಕ್ಟ್‌ ಲಿಪ್ಸ್‌ ನಿಮ್ಮದಾಗ್ಬೇಕಾ? ಮೇಕಪ್‌ಗೂ ಮುನ್ನ ಈ ಎಲ್ಲ ಸ್ಟೆಪ್ಸ್‌ ಫಾಲೋ ಮಾಡಿ

ಎಷ್ಟೇ ಚೆನ್ನಾಗಿ ಮೇಕಪ್‌ ಮಾಡಿದರೂ ಲಿಪ್ಸ್‌ಟಿಕ್‌ ಚೆನ್ನಾಗಿಲ್ಲ ಅಂತಾದರೆ ಓವರ್‌ ಆಲ್‌ ಲುಕ್‌ ಡಲ್‌ ಆಗಿ ಬಿಡುತ್ತದೆ. ಇನ್ನು ಮುಖಕ್ಕೆ ಏನೂ ಹಚ್ಚದೆ ಬರೀ ಲಿಪ್ಸ್‌ಟಿಕ್‌ ಹಾಗೂ ಕಾಜಲ್‌ ಹಚ್ಚಿದರೆ ಮುಖದ ಅಂದವೇ ಬದಲಾಗುತ್ತದೆ. ಪರ್ಫೆಕ್ಟ್‌ ಲಿಪ್ಸ್‌ಟಿಕ್‌ ಹೇಗೆ ಹಚ್ಚೋದು? ಹಚ್ಚುವ ಮುನ್ನ ಯಾವೆಲ್ಲಾ ಸ್ಟೆಪ್ಸ್‌ ಫಾಲೋ ಮಾಡ್ಬೇಕು? ಇಲ್ಲಿದೆ ಡೀಟೇಲ್ಸ್‌..

ವಾರದಲ್ಲಿ ಎರಡು ಬಾರಿ ತುಟಿಗಳನ್ನು ಸ್ಕ್ರಬ್‌ ಮಾಡಿ. ನಿತ್ಯವೂ ಮಾಯಿಶ್ಚರೈಸ್‌ ಮಾಡಿ. ಇದು ಲಿಪ್ಸ್‌ ಚಾಪಿ ಆಗದಂತೆ ತಡೆಗಟ್ಟುತ್ತದೆ.

ಮೊದಲು ತುಟಿಗಳಿಗೆ ಕನ್ಸೀಲರ್‌ ಅಥವಾ ಪ್ರೈಮರ್‌ ಹಚ್ಚಿ, ಇದು ಬಣ್ಣ ಹಚ್ಚುವ ಮುನ್ನ ಜಾಗವನ್ನು ಕ್ಲೀನ್‌ ಮಾಡಿಕೊಂಡಂತೆ.

ನಂತರ ಲಿಪ್‌ಲೈನರ್‌ ಬಳಕೆ ಮಾಡಿ, ಸ್ಮಡ್ಜ್‌ ಮಾಡಿ.

ನಂತರ ಲಿಪ್ಸ್‌ಟಿಕ್‌ ಹಚ್ಚಿ, ಟಿಶ್ಯೂನಿಂದ ಎಕ್ಸ್ಟ್ರಾಲಿಪ್ಸ್‌ಟಿಕ್‌ ಒರೆಸಿ.

ಸಣ್ಣ ಬ್ರಶ್‌ನಿಂದ ಕನ್ಸೀಲರ್‌ ತೆಗೆದುಕೊಂಡು ತುಟಿಯ ಕೊನೆಗಳನ್ನು ಕ್ಲೀನ್‌ ಮಾಡಿ

ಹೆಚ್ಚು ಸಮಯ ಲಿಪ್ಸ್‌ಟಿಕ್‌ ತುಟಿಯ ಮೇಲೆ ಉಳಿಯಬೇಕು ಎಂದರೆ ಸೆಟ್ಟಿಂಗ್‌ ಪೌಡರ್‌ ತುಟಿಯ ಮೇಲೆ ಹಚ್ಚಿಕೊಂಡು ಒರೆಸಿಬಿಡಿ.

ಈ ರೀತಿ ಮಾಡಿದರೆ ಪರ್ಫೆಕ್ಟ್‌ ಲಿಪ್ಸ್‌ ನಿಮ್ಮದಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !