ಕಾಫಿ, ಟೀ ಅಥವಾ ಊಟದ ಕರೆಗಳಿಂದ ಹಲ್ಲುಗಳ ಬಣ್ಣ ಬದಲಾಗುತ್ತದೆ. ಹಲ್ಲುಗಳನ್ನು ಬೆಳ್ಳಗಾಗಿ ಹೊಳೆಯುವಂತೆ ಮಾಡಬೇಕಾ? ಈ ರೂಲ್ಸ್ ಫಾಲೋ ಮಾಡಿ.
ಅಡಿಗೆ ಸೋಡಾ, ಅಥವಾ ಸೋಡಿಯಂ ಬೈಕಾರ್ಬನೇಟ್ ಎನ್ನಲಾಗುವ ಇದು ಹಲ್ಲುಗಳ ಮೇಲಿನ ಮೇಲ್ಮೈ ಕಲೆಗಳನ್ನು ತೆಗೆದು ಹಾಕಲು ಮಾಡಲು ಸಹಾಯ ಮಾಡುತ್ತದೆ.
ಹಲ್ಲುಗಳನ್ನು ಬಿಳಿಯಾಗಿಸುವುದರಲ್ಲಿ ತೆಂಗಿನ ಎಣ್ಣೆ ಕೂಡ ಎತ್ತಿದ ಕೈ. ಆಯಿಲ್ ಪುಲ್ಲಿಂಗ್ ಮಾಡುವ ಅಭ್ಯಾಸ ನಿಮ್ಮದಾಗಲಿ.
ತೆಂಗಿನ ಚಿಪ್ಪುಗಳು ಅಥವಾ ಬಿದಿರಿನಿಂದ ತಯಾರಿಸಿದ ಇದ್ದಿಲು ಪುಡಿ ಹಲ್ಲನ್ನು ಹೊಳಪಿಸುತ್ತದೆ. ಈ ಕಪ್ಪು ಪುಡಿ ವಿಷವನ್ನು ಹೀರಿಕೊಳ್ಳುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ನಿಮ್ಮ ಬಾಯಿಯಲ್ಲಿ, ಇದು ಟ್ಯಾನಿನ್‌ಗಳು ಮತ್ತು ಕಾಫಿ, ಚಹಾ ಮತ್ತು ವೈನ್‌ನ ಕಲೆಗಳನ್ನು ನಿವಾರಿಸುತ್ತದೆ.
ಆಪಲ್ ಸೈಡರ್ ವಿನೆಗರ್ ಕೂಡ ಹಲ್ಲಿನ ವಿಚಾರದಲ್ಲಿ ಹೀರೋ ಎಂದಿನಿಸಿಕೊಂಡಿದೆ. ಇದು ಜೀರ್ಣಕ್ರಿಯೆ ಅಥವಾ ಚರ್ಮಕ್ಕೆ ಸಹಾಯ ಮಾಡುವುದಲ್ಲದೆ, ಬಾಯಿಯ ಆರೈಕೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ.
ಹಲ್ಲುಗಳ ಆರೋಗ್ಯ ಚೆನ್ನಾಗಿರಬೇಕು ಎಂದರೆ ದಿನಕ್ಕೆರಡು ಬಾರಿ ಬ್ರಶ್ ಮಾಡಿ, ನಾಲಗೆ ಕಸವನ್ನು ತೆಗೆಯಿರಿ. ಇನ್ನು ಪ್ರತೀ ಊಟ ತಿಂಡಿ ತಿಂದಾಗಲೂ ಬಾಯನ್ನು ನೀರಿನಿಂದ ಮುಕ್ಕಳಿಸಿ.