ಶಾಲೆಯಿಂದ ಮನೆಗೆ ಬರುವ ಮಕ್ಕಳಿಗೆ “ಇವತ್ತು ಏನು ಕಲಿತೆ?” ಎಂದು ಕೇಳುವುದು ಸಾಮಾನ್ಯವಾದ ಪ್ರಶ್ನೆ. ಆದರೆ ಬಹುತೇಕ ಸಮಯದಲ್ಲಿ ಮಕ್ಕಳು “ಏನು ಇಲ್ಲ” ಎಂದು ಉತ್ತರಿಸುತ್ತಾರೆ. ಮಕ್ಕಳಲ್ಲಿ ಶಾಲೆಯ ಅನುಭವಗಳನ್ನು ಹಂಚಿಕೊಳ್ಳುವ ಅಭ್ಯಾಸವನ್ನು ರೂಪಿಸಲು, ಅವರು ಉತ್ಸಾಹದಿಂದ ಪ್ರತಿಕ್ರಿಯಿಸುವಂತಹ ಸಂವೇದನಾಶೀಲ, ಮುಕ್ತ ಹಾಗೂ ಆಸಕ್ತಿದಾಯಕ ಪ್ರಶ್ನೆಗಳನ್ನೇಕೇಳುವುದು ಬಹಳ ಪರಿಣಾಮಕಾರಿಯಾಗಿದೆ.
“ಇವತ್ತು ಶಾಲೆಯಲ್ಲಿ ನಿನಗೆ ಅತ್ಯಂತ ಖುಷಿಯಾಗಿದ ಕ್ಷಣ ಯಾವುದು?”
ಈ ಪ್ರಶ್ನೆ ಮಕ್ಕಳಿಗೆ ಪಾಸಿಟಿವ್ ಅನುಭವಗಳನ್ನು ಮತ್ತೆ ನೆನೆಸುವ ಅವಕಾಶ ನೀಡುತ್ತದೆ, ಹಾಗೆಯೇ ಅವರ ದಿನದ ಸಂತೋಷದ ಮೂಲಗಳನ್ನು ತಿಳಿಯಲು ಸಹಾಯಮಾಡುತ್ತದೆ.
“ಇವತ್ತು ಯಾರ ಜೊತೆ ಹೊಸದಾಗಿ ಸ್ನೇಹ ಬೆಳೆಸಿಕೊಂಡೆ?”
ಈ ಪ್ರಶ್ನೆಯಿಂದ ಮಕ್ಕಳ ಸಾಮಾಜಿಕ ಪರಿಧಿಯ ಬಗ್ಗೆ ತಿಳಿಯಬಹುದು ಮತ್ತು ಅವರು ಹೇಗೆ ಸ್ನೇಹ ಬೆಳೆಸುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು.
“ಇವತ್ತು ಶಿಕ್ಷಕರು ನಿನ್ನ ಬಗ್ಗೆ ಮೆಚ್ಚುಗೆಯ ಮಾತನಾಡಿದ್ರ?”
ಮಕ್ಕಳಿಗೆ ಗಮನ, ಮೆಚ್ಚುಗೆ ದೊರಕಿದ ಅನುಭವಗಳು ಅವರು ಹಂಚಿಕೊಳ್ಳಲು ಇಚ್ಛಿಸುವುದರ ಮೂಲಕ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
“ಯಾವ ವಿಷಯ ಇವತ್ತು ಸ್ವಲ್ಪ ಕಷ್ಟ ಅನ್ನಿಸ್ತು?”
ಈ ಪ್ರಶ್ನೆಯಿಂದ ಮಕ್ಕಳು ತಮ್ಮ ಸಮಸ್ಯೆಗಳನ್ನು ಹೇಳಬಹುದು. ಇದರ ಮೂಲಕ ಪೋಷಕರು ಅವರಿಗೆ ಬೆಂಬಲ ನೀಡಬಹುದು.
“ನಿನ್ನ ಗೆಳೆಯನಿಗೆ ಅಥವಾ ಶಿಕ್ಷಕರಿಗೆ ಏನಾದರೂ ಸಹಾಯ ಮಾಡಿದ್ದಿಯಾ?”
ಇದೊಂದು ನೈತಿಕ ಮೌಲ್ಯಗಳೇರ್ಪಡಿಸುವ ಪ್ರಶ್ನೆ. ಇದು ಮಕ್ಕಳಲ್ಲಿ ಸಹಾನುಭೂತಿ, ಸಹಾಯ ಮಾಡುವ ಮನೋಭಾವನೆ ಮತ್ತು ಸಕಾರಾತ್ಮಕ ಚಟುವಟಿಕೆಗೆ ಪ್ರೇರಣೆ ನೀಡುತ್ತದೆ.
ಈ ರೀತಿಯ ಪ್ರಶ್ನೆಗಳ ಮೂಲಕ ಮಕ್ಕಳೊಂದಿಗೆ ಗಟ್ಟಿ ಬಾಂಧವ್ಯ ರೂಪಿಸಿ, ಶಾಲೆಯ ಅನುಭವಗಳನ್ನು ಹಂಚಿಕೊಳ್ಳಲು ಆಸಕ್ತಿ ಮೂಡಿಸಬಹುದು.