ತೂಕ ಇಳಿಸೋದಕ್ಕೆ ಇಷ್ಟ ಇದೆ, ಆದರೆ ಮೋಟಿವೇಷನ್ ಸಿಗ್ತಾ ಇಲ್ಲ ಅಂತಿದ್ರೆ ಮಿಸ್ ಮಾಡದೇ ಇದನ್ನು ಓದಿ.. ಈ ಸಿಂಪಲ್ ಒಂಬತ್ತು ರೀಸನ್ಸ್ ನಿಮ್ಮನ್ನು ಮೋಟಿವೇಟ್ ಮಾಡುತ್ತದೆ..
ಯಾಕೆ ತೂಕ ಇಳಿಸಬೇಕು ಅಂದುಕೊಂಡಿದ್ರಿ? ನಿಮ್ಮ ದೇಹವನ್ನೊಮ್ಮೆ ಕನ್ನಡಿಯಲ್ಲಿ ನೋಡಿಕೊಳ್ಳಿ. ಬಾಡಿ ಶೇಮಿಂಗ್ ಅಂತಲ್ಲ! ಫ್ಯಾಟ್ ಲಾಸ್ ನಿಮ್ಮ ಗೋಲ್ ಎಂದು ನೆನಪಿಸೋಕಷ್ಟೆ.
ನಿಮ್ಮ ಗುರಿ ಏನೇನು? ಎಷ್ಟು ದಿನದಲ್ಲಿ ಏನೆಲ್ಲಾ ಬದಲಾವಣೆ ಬೇಕು ಅಂದುಕೊಂಡಿದ್ರಿ? ಬರೆದಿಡಿ. ಮತ್ತೆ ಓದಿ..
ಒಂದು ರೊಟೀನ್ ಮಾಡಿಕೊಳ್ಳಿ. ಆ ರೊಟೀನ್‌ನಲ್ಲಿ ಒಂದು ದಿನವೂ ಬದಲಾವಣೆ ಮಾಡಿಕೊಳ್ಳಬೇಡಿ. ಹೊರಗೆ ಹೋದಾಗಲೀ, ಟ್ರಿಪ್ ಆಗಲಿ, ನೆಂಟರ ಮನೆ ಆಗಲಿ, ಯಾವುದೇ ಬದಲಾವಣೆ ಮಾಡಬೇಡಿ.
ಇಷ್ಟವಿಲ್ಲದ ವ್ಯಾಯಾಮವನ್ನು ಮಾಡಿ ಬೇಸರ ತರಿಸಿಕೊಳ್ಳಬೇಡಿ. ಇಷ್ಟಪಡುವ ವ್ಯಾಯಾಮಕ್ಕೆ ಮಣೆ ಹಾಕಿ.
ಎಕ್ಟ್ರೀಮ್ಸ್ ಮಾಡಬೇಡಿ. ಕಂಪ್ಲೀಟ್ ಆಗಿ ಜಂಕ್ ತಿನ್ನೋದು ಬಿಡುತ್ತೇನೆ, ಅನ್ನ ಮುಟ್ಟೋದಿಲ್ಲ, ದಿನಕ್ಕೆ ಎರಡು ಗಂಟೆ ಜಿಮ್, ನಿಮಗೆ ನೀವೇ ಹೀಗೆ ಹಿಂಸೆ ಕೊಡಬೇಡಿ.
ವ್ಯಾಯಾಮ ಮಾಡ್ತಾ ಇದ್ದೀನಿ ತೂಕ ಇಳಿತಿಲ್ಲ ಎಂದು ಬೇಜಾರಾಗಬೇಡಿ. ತೂಕ ಇಳಿಯದಿದ್ದರೂ ಮಸಲ್ ಬೆಳೆದು ಫ್ಯಾಟ್ ಇಳಿಯುತ್ತದೆ. ನೋಡೋದಕ್ಕೆ ಸಣ್ಣ ಕಾಣುತ್ತೀರಿ. ದಿನವೂ ಪ್ರಯತ್ನ ಇರಲಿ.
ಪಾಸಿಟಿವ್ ಜನರ ಸುತ್ತಮುತ್ತ ಇರಿ. ಪಾಸಿಟಿವ್ ವಿಷಯಗಳ ಬಗ್ಗೆಯೇ ಗಮನ ಹರಿಸಿ. ನಿನ್ನ ಕೈಲಾಗೋದಿಲ್ಲ ಅನ್ನೋ ಜನರ ಬಗ್ಗೆ ಗಮನ ಕೊಡಬೇಡಿ.
ಒಂದೇ ಸಲ ಹೈಟ್‌ಗೆ ಹೋಗೋಕೆ ಆಗೋದಿಲ್ಲ. ಸಣ್ಣ ಸಣ್ಣ ಮೆಟ್ಟಿಲಿನ ಮೇಲೆ ಗಮನ ಇರಲಿ.
ನೆನಪಿಡಿ ತೂಕ ಇಳಿಕೆ ರೇಸ್ ಅಲ್ಲ, ಯಾರೋ ಮಾಡಿದ್ರೆ ನೀವು ಮಾಡಬೇಕು ಎಂದಲ್ಲ. ನಿಮ್ಮ ಪ್ರೋಗ್ರೆಸ್ ನಿಮಗೆ ಮಾತ್ರ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ.

