Tuesday, September 30, 2025

ದುರ್ಗಾದೇವಿಯ ಆಶೀರ್ವಾದಕ್ಕೆ ಪಾತ್ರರಾಗಬೇಕಾ? ಈ ವಸ್ತುಗಳನ್ನು ಮನೆಗೆ ತನ್ನಿ

ನೀವು ದುರ್ಗಾದೇವಿಯ ಆಶೀರ್ವಾದಕ್ಕೆ ಪಾತ್ರರಾಗಬೇಕಾ? ಈ ನವರಾತ್ರಿಯಂದು ಈ ವಸ್ತುಗಳನ್ನು ಮನೆಗೆ ತನ್ನಿ. ನಿಮ್ಮ ಅದೃಷ್ಟ ಬದಲಾಗುತ್ತದೆ. ಯಾವ ವಸ್ತುಗಳ ನೋಡಿ..

ನವರಾತ್ರಿಯ ಸಮಯದಲ್ಲಿ ದುರ್ಗಾ ಮಾತೆಗೆ ಕೆಂಪು ಬಣ್ಣದ ಸೀರೆಯನ್ನು ಅರ್ಪಿಸುವುದು ಶುಭ. ಕೆಂಪು ಸೀರೆಯನ್ನು ಅರ್ಪಿಸುವುದರಿಂದ ದೇವಿಯ ಆಶೀರ್ವಾದ ಸಿಗುತ್ತದೆ ಮತ್ತು ಆಸೆಗಳು ಈಡೇರುತ್ತವೆ ಎಂದು ನಂಬಲಾಗಿದೆ.

ನವರಾತ್ರಿಯ ಸಮಯದಲ್ಲಿ ಬೆಳ್ಳಿ ಅಥವಾ ಚಿನ್ನದ ನಾಣ್ಯಗಳನ್ನು ಖರೀದಿಸುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ. ಇದನ್ನು ಪೂಜೆಯ ಸಮಯದಲ್ಲಿ ದೇವಿಗೆ ಅರ್ಪಿಸುವುದರಿಂದ ನಿಮ್ಮ ಮನೆಯ ಮೇಲೆ ಲಕ್ಷ್ಮಿ ಮತ್ತು ದುರ್ಗಾ ದೇವಿಯ ಆಶೀರ್ವಾದ ಸದಾ ಇರುತ್ತದೆ ಎಂದು ನಂಬಲಾಗಿದೆ. 

ನವರಾತ್ರಿಯ ಸಮಯದಲ್ಲಿ ಸೌಂದರ್ಯವರ್ಧಕಗಳನ್ನು ಖರೀದಿಸುವುದು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಬಿಂದಿ, ಬಳೆ, ಸಿಂಧೂರ, ಕಾಜಲ್ ಮುಂತಾದ ವಸ್ತುಗಳನ್ನು ಖರೀದಿಸಿ ದುರ್ಗಾ ದೇವಿಗೆ ಅರ್ಪಿಸುವುದು ಅತ್ಯಂತ ಫಲಪ್ರದವಾಗಿದೆ. 

ನವರಾತ್ರಿಯ ಸಮಯದಲ್ಲಿ ನೀವು ಜಾಗ ಆಸ್ತಿಯನ್ನು ಖರೀದಿಸಬಹುದು. ಹಾಗೆ ಮಾಡುವುದು ಬಹಳ ಫಲಪ್ರದ. ಈ ಸಮಯದಲ್ಲಿ ಆಸ್ತಿ ಹಾಗೂ ವಾಹನಗಳನ್ನು ಖರೀದಿಸುವುದು ಶುಭವೆಂದು ನಂಬಲಾಗಿದೆ.