ಶುಗರ್ ಕಡಿಮೆ ಮಾಡ್ಬೇಕಾ? ಕೇಂದ್ರ ಗೃಹ ಸಚಿವರು​ ಹೇಳಿರೋ ಈ ಹೆಲ್ತ್ ಟಿಪ್ಸ್ ಫಾಲೋ ಮಾಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈಗ ಪ್ರತಿಯೊಬ್ಬರ ಮನೆಯಲ್ಲಿಯೂ ಒಬ್ಬರಾದರೂ ಶುಗರ್​ ಪೇಷೆಂಟ್​ ಇರುವ ಸ್ಥಿತಿ ನಿರ್ಮಾಣವಾಗಿದೆ. ಭಾರತ ಕೂಡ ಮಧುಮೇಹಿಗಳ ರಾಜಧಾನಿಯಾಗುತ್ತಿದೆ ಎನ್ನುವ ಹೊತ್ತಿನಲ್ಲಿಯೇ ಮಧುಮೇಹದ ಹೆಸರಿನಲ್ಲಿ ವೈದ್ಯಕೀಯ ಲೋಕ ಸಹಸ್ರಾರು ಕೋಟಿ ರೂಪಾಯಿಗಳ ವ್ಯವಹಾರ ನಡೆಸುತ್ತಿದೆ.

ಇದರ ಕುರಿತು ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ಕಳೆದ ಐದು ವರ್ಷಗಳಿಂದ ತಾವು ಹೇಗೆ ಮಧುಮೇಹವನ್ನು ಇಲ್ಲವಾಗಿಸಿಕೊಂಡಿರುವ ಬಗ್ಗೆ ಮಾತನಾಡಿದ್ದಾರೆ.

ದೇಶದ ಯುವಕರು ತಮ್ಮ ಆರೋಗ್ಯದ ಮೇಲೆ ಸಕ್ರಿಯವಾಗಿ ಗಮನಹರಿಸಬೇಕೆಂದು ಅವರು ಒತ್ತಾಯಿಸಿದ ಸಚಿವರು, ಹೀಗೆ ಮಾಡಿದರೆ ಬದುಕುವುದಕ್ಕಿಂತ 40-50 ವರ್ಷ ಹೆಚ್ಚಿಗೇನೇ ಬದುಕಬಹುದು ಮತ್ತು ದೇಶದ ಪ್ರಗತಿಗೆ ಕೊಡುಗೆ ನೀಡಬಹುದು ಎಂದು ಹೇಳಿದ್ದಾರೆ.

ಅವರು ಕೊಟ್ಟಿರುವ ಟಿಪ್ಸ್​ ಎಂದರೆ, ಅಗತ್ಯ ಪ್ರಮಾಣದ ನಿದ್ರೆ, ದೇಹಕ್ಕೆ ಬೇಕಾಗುವಷ್ಟು ನೀರು ಮತ್ತು ದೇಹಕ್ಕೆ ಅಗತ್ಯ ಇರುವಷ್ಟು ಆಹಾರ ಇವು ಅತ್ಯಗತ್ಯ ಎಂದಿರುವ ಸಚಿವ ಅಮಿತ್​ ಶಾ, ಪ್ರತಿನಿತ್ಯ 2 ಗಂಟೆಗಳಷ್ಟು ತಾವು ವ್ಯಾಯಾಮ ಮಾಡುತ್ತಿರುವ ಕಾರಣ, ಹೇಗೆ ತಮ್ಮ ಆರೋಗ್ಯ ಸ್ಥಿತಿ ಸುಧಾರಿಸಿತು ಎಂದು ಹೇಳಿದ್ದಾರೆ. ಈ ಪದ್ಧತಿ ಮತ್ತು ದಿನನಿತ್ಯದ ವ್ಯಾಯಾಮವು ನನಗೆ ಬಹಳಷ್ಟು ನೀಡಿದೆ. ಇಂದು, ನಾನು ಯಾವುದೇ ರೀತಿಯ ಅಲೋಪಥಿ ಔಷಧ ಮತ್ತು ಇನ್ಸುಲಿನ್‌ನಿಂದ ಮುಕ್ತನಾಗಿದ್ದೇನೆ. ನಾನು ಮುಕ್ತನಾಗಿರುವ ಕಾರಣದಿಂದಲೇ ಇಂದು ನಿಮ್ಮ ಮುಂದೆ ಬಂದು ಈ ಸಲಹೆ ನೀಡಲು ಶಕ್ಯನಾಗಿದ್ದೇನೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!