ಹೊಸದಿಗಂತ ಡಿಜಿಟಲ್ ಡೆಸ್ಕ್:
ಟ್ರಾವೆಲ್ ಮಾಡ್ಬೇಕು ಬಟ್ ಬಜೆಟ್ ಪ್ರಾಬ್ಲಮ್ ಇದ್ಯಾ? ಹಾಗಿದ್ರೆ ಈ ಟ್ರಿಪ್ ಪ್ಯಾಕೇಜ್ ಚೆಕ್ ಮಾಡಿ. ನಿಮಗಾಗಿ ಇಂಡಿಯನ್ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಗುಡ್ ನ್ಯೂಸ್ ನೀಡಿದೆ. ದೆಹಲಿ, ಆಗ್ರಾ, ಜೈಪುರ ವ್ಯಾಪ್ತಿಯಲ್ಲಿ ಬರುವ ಅನೇಕ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಐಆರ್ಸಿಟಿಸಿ ಸೂಪರ್ ಪ್ಯಾಕೇಜ್ ಹೊರತಂದಿದೆ. ಒಂದೇ ಪ್ರವಾಸದಲ್ಲಿ ಯಾವೆಲ್ಲಾ ತಾಣಗಳನ್ನು ನೋಡಬಹುದು? ಪ್ಯಾಕೇಜ್ ದರವೆಷ್ಟು? ಯಾವಾಗ ಪ್ರಯಾಣ ಆರಂಭವಾಗುತ್ತದೆ? ಇಲ್ಲಿದೆ ಡೀಟೇಲ್ಸ್..
ಈ ಪ್ರವಾಸವು 10 ರಾತ್ರಿ ಮತ್ತು 11 ಹಗಲುಗಳನ್ನು ಒಳಗೊಂಡಿದೆ. ಬೆಂಗಳೂರಿನಿಂದ ರೈಲು ಮಾರ್ಗವಾಗಿ ಪ್ರವಾಸ ನಡೆಯುತ್ತದೆ. ಈ ಪ್ರವಾಸವು ಮಾರ್ಚ್ 31ರಂದು ಆರಂಭವಾಗಲಿದ್ದು ದೆಹಲಿ, ಆಗ್ರಾ, ಜೈಪುರದ ವಿವಿಧ ಸ್ಥಳಗಳಿಗೆ ಭೇಟಿ ನೀಡಬಹುದು.
1ನೇ ದಿನ: ಮಾ.31. ಯಶವಂತಪುರ ಜಂಕ್ಷನ್ ರೈಲು ನಿಲ್ದಾಣದಿಂದ ರೈಲು ಸಂಖ್ಯೆ- 12649 ಮೂಲಕ ಮಧ್ಯಾಹ್ನ 1:05ಕ್ಕೆ ಪ್ರಯಾಣ ಆರಂಭ. ಇಡೀ ರಾತ್ರಿಯ ರೈಲು ಪ್ರಯಾಣ.
2ನೇ ದಿನ: ಮಾ.1 ರಂದು ಇಡೀ ಹಗಲು ಮತ್ತು ರಾತ್ರಿ ರೈಲು ಪ್ರಯಾಣ.
3ನೇ ದಿನ: ಮಾ.2ರಂದು 8:10 ಗಂಟೆಗೆ ರೈಲು ಹೆಚ್.ನಿಜಾಮುದ್ದೀನ್ ರೈಲ್ವೆ ನಿಲ್ದಾಣ ತಲುಪುತ್ತದೆ. ಮೊದಲೇ ಬುಕ್ ಮಾಡಿರುವ ಹೋಟೆಲ್‌ಗೆ ತೆರಳಿ ಫ್ರೆಶ್ ಅಪ್ ಆದ ಬಳಿಕ, ದೆಹಲಿ ಸ್ಥಳೀಯ ಪ್ರವಾಸಿ ತಾಣಗಳಾದ ಕುತುಬ್ ಮಿನಾರ್, ಲೋಟಸ್ ಟೆಂಪಲ್, ಅಕ್ಷರಧಾಮಕ್ಕೆ ಭೇಟಿ. ದೆಹಲಿಯಲ್ಲಿ ರಾತ್ರಿ ವಾಸ್ತವ್ಯ.
4ನೇ ದಿನ: ಮಾ.3ರಂದು ಕೆಂಪು ಕೋಟೆ, ರಾಜ್ ಘಾಟ್, ತೀನ್ ಮೂರ್ತಿ ಭವನ, ಇಂಡಿಯಾ ಗೇಟ್ಗೆ ಭೇಟಿ. ದೆಹಲಿಯಲ್ಲಿ ರಾತ್ರಿ ವಾಸ್ತವ್ಯ.
5ನೇ ದಿನ: ಮಾ.4ರಂದು ಜೈಪುರಕ್ಕೆ ಹೊರಡುವುದು. ಜೈಪುರ ತಲುಪಿದ ಬಳಿಕ ಇಲ್ಲಿರುವ ಹೋಟೆಲ್‌ನಲ್ಲಿ ಚೆಕ್ಇನ್ ಮಾಡಿದ ನಂತರ, ಹವಾ ಮಹಲ್ಗೆ ಭೇಟಿ. ಬಳಿಕ ಇಲ್ಲಿ ಶಾಪಿಂಗ್ ಮಾಡಬಹುದು. ಜೈಪುರದಲ್ಲಿ ರಾತ್ರಿ ವಾಸ್ತವ್ಯ.
6ನೇ ದಿನ: ಮಾ.5ರಂದು ಅಮೇರ್ ಕೋಟೆ, ಸಿಟಿ ಪ್ಯಾಲೇಸ್, ಜಂತರ್ ಮಂತರ್ಗೆ ತೆರಳುವುದು. ಜೈಪುರದಲ್ಲಿ ರಾತ್ರಿ ವಾಸ್ತವ್ಯ.
7ನೇ ದಿನ: ಮಾ.6ರಂದು ಆಗ್ರಾಕ್ಕೆ ಆಗಮಿಸುವಾಗ ದಾರಿಯಲ್ಲಿ ಫತೇಪುರ್ ಸಿಕ್ರಿಗೆ ಭೇಟಿ. ಬಳಿಕ ಆಗ್ರಾ ತಲುಪುವುದು. ಇಲ್ಲಿರುವ ಹೋಟೆಲ್‌ನಲ್ಲಿ ಚೆಕ್ ಇನ್ ಮಾಡುವುದು. ಆಗ್ರಾದಲ್ಲಿ ರಾತ್ರಿ ವಾಸ್ತವ್ಯ ಹೂಡುವುದು.
8ನೇ ದಿನ: ಮಾ.7ರಂದು ಬೆಳಗ್ಗೆ ತಾಜ್ ಮಹಲ್ ಭೇಟಿ. ಬಳಿಕ ಹೋಟೆಲ್ನಿಂದ ಚೆಕ್ ಔಟ್ ಮಾಡಿ, ಆಗ್ರಾ ಕೋಟೆಗೆ ಭೇಟಿ ನೀಡುವುದು. ನಂತರ, ದೆಹಲಿ ತೆರಳಿ ಇಲ್ಲಿರುವ ಹೋಟೆಲ್‌ನಲ್ಲಿ ಚೆಕ್ ಇನ್ ಮಾಡಿ, ರಾತ್ರಿ ಇಲ್ಲಿ ತಂಗುವುದು.
9ನೇ ದಿನ: ಮಾ.8ರಂದು ಬೆಳಗಿನ ಉಪಹಾರದ ನಂತರ, ಹೆಚ್.ನಿಜಾಮುದ್ದೀನ್ ರೈಲ್ವೆ ನಿಲ್ದಾಣಕ್ಕೆ ಹಿಂದಿರುಗುವುದು. ಇಲ್ಲಿಂದ ರೈಲು ಸಂಖ್ಯೆ-12650 ಬೆಳಗ್ಗೆ 8.20ಕ್ಕೆ ರೈಲು ಮರಳಿ ಬರುವ ಪ್ರಯಾಣ ನಡೆಯಲಿದೆ.
10ನೇ ದಿನ: ಮಾ.9ರಂದು ಪೂರ್ಣ ಹಗಲು ಮತ್ತು ರಾತ್ರಿ ರೈಲು ಪ್ರಯಾಣ.
11ನೇ ದಿನ: ಮಾ.10ರಂದು ಬೆಳಗ್ಗೆ 4.30ಕ್ಕೆ ಯಶವಂತಪುರ ರೈಲು ನಿಲ್ದಾಣಕ್ಕೆ ಬಂದು ತಲುಪುದರೊಂದಿಗೆ ಪ್ರವಾಸ ಮುಕ್ತಾಯ.
- ಸಿಂಗಲ್ ಶೇರಿಂಗ್‌ಗೆ ₹46,600
- ಡಬಲ್ ಶೇರಿಂಗ್‌ಗೆ ₹32,500
- ಟ್ರಿಪಲ್ ಶೇರಿಂಗ್‌ಗೆ ₹30,700
- 5 ರಿಂದ 11 ವರ್ಷ ವಯಸ್ಸಿನ ಮಕ್ಕಳಿಗೆ ಹಾಸಿಗೆ ಇದ್ದರೆ ₹26,800, ಹಾಸಿಗೆ ರಹಿತ ₹23,000 ಶುಲ್ಕ ಪಾವತಿಸಬೇಕಾಗುತ್ತದೆ.