ಹೊಸದಿಗಂತ ಡಿಜಿಟಲ್ ಡೆಸ್ಕ್:
ದೀರ್ಘ ಚರ್ಚೆಗೆ ಗ್ರಾಸವಾಗಿದ್ದ ವಕ್ಫ್ ತಿದ್ದುಪಡಿ ಮಸೂದೆಯನ್ನು ನಾಳೆ(ಬುಧವಾರ) ಲೋಕಸಭೆಯಲ್ಲಿ ಮಂಡನೆಯಾಗಲಿದ್ದು, ಆಡಳಿತಾರೂಢ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಇದನ್ನು ಅಂಗೀಕರಿಸುವಂತೆ ಒತ್ತಾಯಿಸುತ್ತಿದೆ ಮತ್ತು ಪ್ರತಿಪಕ್ಷಗಳು ಇದನ್ನು “ಅಸಂವಿಧಾನಿಕ” ಎಂದು ತೀವ್ರವಾಗಿ ಖಂಡಿಸಿವೆ.
542 ಸದಸ್ಯ ಬಲದ ಸದನದಲ್ಲಿ 293 ಸಂಸದರನ್ನು ಹೊಂದಿರುವ ಎನ್‌ಡಿಎ ಮಸೂದೆಯನ್ನು ಅಂಗೀಕರಿಸುವಷ್ಟು ಉತ್ತಮ ಸ್ಥಾನದಲ್ಲಿದೆ. ಪ್ರಮುಖ ಮಿತ್ರಪಕ್ಷಗಳಲ್ಲಿ ತೆಲುಗು ದೇಶಂ ಪಕ್ಷ 16 ಸಂಸದರನ್ನು ಹೊಂದಿದೆ, ಜನತಾದಳ (ಯುನೈಟೆಡ್) 12, ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) 5, ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 7 ಸಂಸದರನ್ನು ಹೊಂದಿದೆ.
ರಾಜ್ಯಸಭೆಯಲ್ಲಿ, ಬಿಜೆಪಿಯ 98, ಜೆಡಿ (ಯು) 4, ಅಜಿತ್ ಪವಾರ್ ಅವರ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) 3 ಮತ್ತು ಟಿಡಿಪಿಯ 2 ಸೇರಿದಂತೆ ಒಟ್ಟು 125 ಸಂಸದರ ಪ್ರಾತಿನಿಧ್ಯವನ್ನು ಎನ್‌ಡಿಎ ಹೊಂದಿದೆ. ಇಲ್ಲಿ ಈ ಬಿಲ್ ಪಾಸಾಗಲು 119 ವೋಟ್ ಬೇಕಾಗುತ್ತದೆ. ಲೋಕಸಭೆಯಲ್ಲಿ ಅಂಗೀಕಾರವಾದ ನಂತರ ಮಸೂದೆಯನ್ನು ಮೇಲ್ಮನೆಯಲ್ಲಿ ಮಂಡಿಸಲಾಗುವುದು.