April 4, 2026
Saturday, April 4, 2026
spot_img

ಸೋಶಿಯಲ್‌ ಮೀಡಿಯಾದಲ್ಲಿ ಯುದ್ಧದ ಫೋಟೋ ಶೇರ್: ಯುಎಇನಲ್ಲಿ ವಿಮಾನ ಸಿಬ್ಬಂದಿ ಅರೆಸ್ಟ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ಹೆಚ್ಚುತ್ತಿದ್ದು, ಈ ಮದ್ಯೆ ದುಬೈ ವಿಮಾನ ನಿಲ್ದಾಣದ ಬಳಿ ಸಂಭವಿಸಿದ ಸ್ಪೋಟದ ಕುರಿತು ಫೋಟೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಶೇರ್ ಮಾಡಿದ ವಿಮಾನಯಾನ ಸಂಸ್ಥೆಯ ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈಗಾಗಲೇ ಯುಎಇ ಯುದ್ಧ ಸಂಬಂಧಿತ ಫೋಟೋ ವಿಡಿಯೋಗಳ ಪ್ರಸಾರವನ್ನು ನಿಷೇಧಿಸಿದ್ದು, ಇದರ ನಡುವೆ ಯುಎಇಯಲ್ಲಿ ಸ್ಥಳೀಯ ವಿಮಾನಯಾನ ಸಂಸ್ಥೆಯಲ್ಲಿ ಕ್ಯಾಬಿನ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ 25 ವರ್ಷದ ಬ್ರಿಟಿಷ್ ಫ್ಲೈಟ್ ಅಟೆಂಡರ್‌ ಎಂಬಾತ ಫೋಟೋ ವನ್ನು ಶೇರ್ ಮಾಡಿದ್ದು , ಹೀಗಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಯುಎಇಯ ಕಠಿಣ ಸೈಬರ್ ಅಪರಾಧ ಕಾನೂನುಗಳ ಅಡಿಯಲ್ಲಿ ಆತನನ್ನು ಬಂಧಿಸಿದ್ದು, ಆತನಿಗೆ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು 50 ಲಕ್ಷ ರುಪಾಯಿ ದಂಡ ವಿಧಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !