ಟೆನಿಸ್‌ ಆಟಗಾರ್ತಿ ಮರ್ಡರ್‌ ಮಾಡೋದಕ್ಕೆ ಮ್ಯೂಸಿಕ್‌ ಆಲ್ಬಮ್‌ ಕಾರಣ? ಕೊಲೆಗಾರ ತಂದೆ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ನ್ನಿಸ್‌ ಆಟಗಾರ್ತಿಯಾಗಿದ್ದ ಮಗಳನ್ನು ತಂದೆಯೇ ಹತ್ಯೆಗೈದ ಪ್ರಕರಣಕ್ಕೆ ಈಗ ಸ್ಫೋಟಕ ಟ್ವಿಸ್ಟ್‌ ಸಿಕ್ಕಿದೆ. ಮ್ಯೂಸಿಕ್‌ ಆಲ್ಬಂ ವಿಚಾರದಲ್ಲಿ ಸಿಟ್ಟಾಗಿ ಮಗಳನ್ನು ತಂದೆಯೇ ಕೊಲೆ ಮಾಡಿದ್ದಾನಾ ಎಂಬ ಆಯಾಮದಲ್ಲಿ ಈಗ ತನಿಖೆ ಆರಂಭವಾಗಿದೆ.

ಬಂಧನಕ್ಕೆ ಒಳಗಾದ ದೀಪಕ್‌ ವಿಚಾರಣೆ ವೇಳೆ ಕೆಲ ವಿಚಾರಗಳು ಬೆಳಕಿಗೆ ಬಂದಿವೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮಗಳು ವರದಿ ಮಾಡಿವೆ.

ರಾಧಿಕಾ ಯಾದವ್‌ ʼಕರ್ವಾನ್ʼ ಹೆಸರಿನ ಮ್ಯೂಸಿಕ್‌ ಅಲ್ಬಂನಲ್ಲಿ ನಟಿಸಿದ್ದಳು. ಇದನ್ನು ಜೀಶನ್ ಅಹ್ಮದ್ ನಿರ್ಮಾಣ ಮಾಡಿದ್ದು ಸುಮಾರು ಒಂದು ವರ್ಷದ ಹಿಂದೆ LLF ರೆಕಾರ್ಡ್ಸ್ ಲೇಬಲ್ ಅಡಿಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ವಿಡಿಯೋದಲ್ಲಿ ಇನಾಂ ಜೊತೆ ರಾಧಿಕಾ ಯಾದವ್‌ ಬಹಳ ರೊಮ್ಯಾಂಟಿಕ್‌ ಆಗಿ ಅಭಿನಯಿಸಿದ್ದಳು.

ಈ ಅಲ್ಬಂನಲ್ಲಿ ಈಕೆಯ ಪಾತ್ರಕ್ಕೆ ತಂದೆ ದೀಪಕ್‌ ಆಕ್ಷೇಪ ವ್ಯಕ್ತಪಡಿಸಿ ಡಿಲೀಟ್‌ ಮಾಡುವಂತೆ ಸೂಚಿಸಿದ್ದ. ಆದರೆ ರಾಧಿಕಾ ಯಾದವ್‌ ಯಾದವ್‌ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಿಂದ ಡಿಲೀಟ್‌ ಮಾಡಲು ಒಪ್ಪಿರಲಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ತಂದೆ ಮಗಳ ಜೊತೆ ಆಗಾಗ ಜಗಳ ನಡೆಯುತ್ತಿತ್ತು. ತನ್ನ ಮಾತನ್ನು ಎಷ್ಟು ಹೇಳಿದರೂ ಕೇಳದ್ದಕ್ಕೆ ಸಿಟ್ಟಾಗಿ ದೀಪಕ್‌ ಯಾದವ್‌ ಮಗಳನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಮಾಜಿ ಬ್ಯಾಂಕ್ ಉದ್ಯೋಗಿಯಾಗಿದ್ದ ದೀಪಕ್ ತನ್ನ ಮಗಳು ಸೆಕ್ಟರ್ 57 ರಲ್ಲಿ ತನ್ನದೇ ಆದ ಟೆನ್ನಿಸ್ ಅಕಾಡೆಮಿಯನ್ನು ತೆರೆದ ನಂತರ ಆಕೆಗೆ ಪ್ರಚಾರ ಹೆಚ್ಚು ಸಿಕ್ಕಿದ್ದಕ್ಕೆ ಅಸಮಾಧಾನಗೊಂಡಿದ್ದ. ಮಗಳು ಟೆನ್ನಿಸ್‌ ಅಕಾಡೆಮಿ ನಡೆಸುವುದು ದೀಪಕ್‌ಗೆ ಇಷ್ಟ ಇರಲಿಲ್ಲ. ಈ ಅಕಾಡೆಮಿಯನ್ನು ಮುಚ್ಚುವಂತೆ ತಂದೆ ಹೇಳಿದ್ದರೂ ಆಕೆ ಮುಚ್ಚಿರಲಿಲ್ಲ. ಈ ಮಧ್ಯೆ ಮಗಳು ಸಂಗೀತ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದು ತಂದೆಗೆ ಮತ್ತಷ್ಟು ಸಿಟ್ಟು ಬಂದಿದೆ. ಈ ಕಾರಣಕ್ಕೆ ಗುರುವಾರ ಮನೆಯಲ್ಲಿ ರಾಧಿಕಾ ಅಡುಗೆ ಮಾಡುತ್ತಿದ್ದಾಗ ದೀಪಕ್‌ ಯಾದವ್‌ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾನೆ ಎಂದು ವರದಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!