Sunday, November 2, 2025

ಆ ನಟನೊಂದಿಗೆ ಸಂವಾದ ನಡೆಸಿದ್ದೇ ತಪ್ಪಾ? ಬಿಗ್ ಬಿಗೆ ಬಂತಾ ಖಲಿಸ್ತಾನಿಗಳಿಂದ ಬೆದರಿಕೆ?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಮಿತಾಬ್ ಬಚ್ಚನ್ ನಡೆಸಿಕೊಡುತ್ತಿರುವಕೌನ್‍ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಪಂಜಾಬಿ ಗಾಯಕ ಮತ್ತು ನಟ ದಿಲ್ಜಿತ್ ದೋಸಾಂಜ್ ಭಾಗವಹಿಸಿದ್ದು, ಇದರಿಂದ ಖಲಿಸ್ತಾನಿ ಸಂಘಟನೆಗಳಿಂದ ಬೆದರಿಕೆಗಳ ಅಲೆಯನ್ನು ಹುಟ್ಟುಹಾಕಿದೆ.

ದಿಲ್ಜಿತ್ ದೋಸಾಂಜ್ ಅವರೊಂದಿಗಿನ ಮಾತುಕತೆಯ ನಂತರ ನಟ ಅಮಿತಾಬ್ ಬಚ್ಚನ್‌ಗೆ ಬೆದರಿಕೆ ಬಂದಿವೆ ಎಂದು ಮೂಲಗಳು ತಿಳಿಸಿವೆ. ದೋಸಾಂಜ್ ಅವರು ಬಚ್ಚನ್ ಅವರ ಪಾದಗಳನ್ನು ಮುಟ್ಟಿ ಮಾತನಾಡಿದ್ದಕ್ಕೆ ಖಲಿಸ್ತಾನಿ ಸಂಘಟನೆ ಸಿಖ್ಸ್ ಫಾರ್ ಜಸ್ಟೀಸ್ (SFJ) ನಿಂದ ದೋಸಾಂಜ್ ಅವರಿಗೆ ಬೆದರಿಕೆ ಬಂದಿರುವುದಾಗಿ ವರದಿಯಾಗಿದೆ.

ನವೆಂಬರ್ 1 ರಂದು ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿದ್ದ ದೋಸಾಂಜ್ ಅವರ ಸಂಗೀತ ಕಚೇರಿಯನ್ನು ಸ್ಥಗಿತಗೊಳಿಸಲು ಪ್ರಯತ್ನಿಸುತ್ತದೆ ಎಂದು SFJ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನುನ್ ಎಚ್ಚರಿಸಿದ್ದಾನೆ.

ನಟ-ಗಾಯಕ 1984 ರ ಸಿಖ್ ವಿರೋಧಿ ದಂಗೆಯ ಸಂತ್ರಸ್ತರನ್ನು ಅಗೌರವಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯ ನಂತರದ 1984 ರ ದಂಗೆಯ ಸಮಯದಲ್ಲಿ ಬಚ್ಚನ್ ಹಿಂಸಾಚಾರವನ್ನು ಪ್ರಚೋದಿಸುವಲ್ಲಿ ಪಾತ್ರ ವಹಿಸಿದ್ದಾರೆ ಎಂದು SFJ ಆರೋಪಿಸಿದೆ.

ಗಲಭೆಯ ಸಮಯದಲ್ಲಿ ಬಚ್ಚನ್ ಅವರು ರಕ್ತಕ್ಕಾಗಿ ರಕ್ತ ಎಂಬ ಘೋಷಣೆಯನ್ನು ಬಳಸಿದ್ದಾರೆ ಎಂದು ಸಂಘಟನೆ ಹೇಳಿದೆ. ಗಲಭೆಯಲ್ಲಿ ಭಾರತದಾದ್ಯಂತ 30,000 ಕ್ಕೂ ಹೆಚ್ಚು ಸಿಖ್ ಪುರುಷರು, ಮಹಿಳೆಯರು ಮತ್ತು ಮಕ್ಕಳನ್ನು ಹತ್ಯೆ ಮಾಡಿ ಹಿಂಸಾಚಾರ ಮಾಡಲಾಗಿತ್ತು ಎಂದು ಸಂಘಟನೆ ಕಿಡಿಕಾರಿದೆ.

ನವೆಂಬರ್ 1ರಂದು ನಿಗದಿಯಾಗಿದ್ದ ದಿಲ್ಜಿತ್ ದೋಸಾಂಜ್ ಅವರ ಔರಾ 2025 ಸಂಗೀತ ಕಚೇರಿಗೆ ಬೆದರಿಕೆ ಇರುವ ಬಗ್ಗೆ ಮೆಲ್ಬೋರ್ನ್ ಪೊಲೀಸರು ಮತ್ತು ಗುಪ್ತಚರ ಸಂಸ್ಥೆಗಳು ಬುಧವಾರ ಕಳವಳ ವ್ಯಕ್ತಪಡಿಸಿವೆ. ಗುಪ್ತಚರ ವರದಿಗಳ ಪ್ರಕಾರ, ಸಿಖ್ಸ್ ಫಾರ್ ಜಸ್ಟೀಸ್ (ಎಸ್‌ಎಫ್‌ಜೆ) ಗುಂಪು ಈ ಉನ್ನತ ಮಟ್ಟದ ಕಾರ್ಯಕ್ರಮವನ್ನು ಗುರಿಯಾಗಿಸಲು ಪ್ರಯತ್ನಿಸುತ್ತಿದೆ ಎಂದು ಎಚ್ಚರಿಸಿದೆ.

error: Content is protected !!