ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಪತ್ರೆಯಲ್ಲಿ ಅಪಾಯಿಂಟ್‌ಮೆಂಟ್ ಇಲ್ಲದೆ ವೈದ್ಯರ ಕೊಠಡಿಗೆ ಕಳುಹಿಸಲು ನಿರಾಕರಿಸಿದ್ದಕ್ಕೆ ವ್ಯಕ್ತಿಯೊಬ್ಬ ಮಹಿಳಾ ರಿಸೆಪ್ಶನಿಸ್ಟ್ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಮಹಾರಾಷ್ಟ್ರದ ಥಾಣೆಯಲ್ಲಿ ರೋಗಿಯನ್ನು ಕರೆದುಕೊಂಡು ವೈದ್ಯರ ಭೇಟಿಯಾಗಲು ಬಂದ ವ್ಯಕ್ತಿಗೆ ಐದು ನಿಮಿಷ ಕಾಯುವಂತೆ ಕ್ಲಿನೀಕ್ ರಿಸೆಪ್ಶನಿಸ್ಟ್ ಹೇಳಿದ್ದಾರೆ.ಇದರಿಂದ ಕೋಪಗೊಂಡು ಮಹಿಳಾ ರಿಸೆಪ್ಶನಿಸ್ಟ್ ಮೇಲೆ ವ್ಯಕ್ತಿ ಹಲ್ಲೆ ಮಾಡಿದ್ದಾನೆ. ಈತ ಹಲ್ಲೆ ಮಾಡುತ್ತಿರುವ ದೃಶ್ಯ ಕ್ಲಿನಿಕ್‌ನಲ್ಲಿ ಅಳವಡಿಸಿದ ಸಿಸಿಟಿವಿಯಲ್ಲಿ ದಾಖಲಾಗಿದೆ.
ಇಲ್ಲಿನ ಶ್ರೀ ಬಾಲಚಿತಿಕಾ ಕ್ಲಿನೀಕ್‌ನಲ್ಲಿ ವೈದ್ಯರ ಭೇಟಿಯಾಗಿ ಔಷಧಿ ಪಡೆಯಲು ಸರದಿ ಸಾಲಿನಲ್ಲಿ ಕುಳಿತಿದ್ದಾರೆ. ಇತ್ತ ವೈದ್ಯರು ಒಬ್ಬೊಬ್ಬೊರನ್ನೇ ತಪಾಸಣ ಮಾಡಿ ಚಿಕಿತ್ಸೆ, ಔಷಧಿ ನೀಡುತ್ತಿದ್ದಾರೆ. ಇದೇ ವೇಳೆ ವೈದ್ಯರ ಭೇಟಿಯಾಗಲು ಬಂದವರಿಗೆ ಟೋಕನ್ ನೀಡಿ ಕಾಯುವಂತೆ ಕ್ಲಿನಿಕ್ ರಿಸೆಪ್ಶನಿಸ್ಟ್ ಸೂಚಿಸಿದ್ದಾರೆ. ಇದರ ನಡುವೆ ಗೋಕುಲ್ ಝಾ ಅನ್ನೋ ವ್ಯಕ್ತಿ ರೋಗಿ ಜೊತೆ ಆಗಮಿಸಿದ್ದಾರೆ. ಸರದಿ ಸಾಲಿನಲ್ಲಿ ನಿಂತಿದ್ದ ರೋಗಿಗಳ ಹಿಂದೆ ನಿಲ್ಲದ ಈತ ನೇರವಾಗಿ ವೈದ್ಯರ ಭೇಟಿಗೆ ಆಗಮಿಸಿದ್ದಾನೆ.
ಸರದಿ ಸಾಲಿನಲ್ಲಿ ನಿಲ್ಲದೆ ನೇರವಾಗಿ ವೈದ್ಯರ ಬೇಟಿಗೆ ಆಗಮಿಸಿದ ಗೋಕುಲ್ ಹಾಗೂ ರೋಗಿಯನ್ನು ಕ್ಲಿನಿಕ್ ಮಹಿಳಾ ರಿಸೆಪ್ಶನಿಸ್ಟ್ ಸೋನಾಲಿ ತಡೆದಿದ್ದಾರೆ. ಇಷ್ಟೇ ಅಲ್ಲ ಎಲ್ಲರೂ ವೈದ್ಯರ ಭೇಟಿಗಾಗಿ ಕಾಯುತ್ತಿದ್ದಾರೆ. ವೈದ್ಯರು ತಪಾಸಣೆ ನಡೆಸುತ್ತಿದ್ದಾರೆ. ನಿಮ್ಮ ಸರದಿ ಬಂದಾಗ ನಾವೇ ಕರೆಯುತ್ತೇವೆ ಎಂದು ಸೂಚಿಸಿದ್ದಾರೆ. ಆದರೆ ಈ ಮಾತುಗಳು ಗೋಕುಲ್ ಪಿತ್ತ ನೆತ್ತಿಗೇರುವಂತೆ ಮಾಡಿದೆ. ಮಹಿಳಾ ರೆಸೆಪ್ಶನಿಸ್ಟ್ ಮೇಲೆ ಹಲ್ಲೆ ನಡೆಸಿದ್ದಾರೆ.
ಆಕೆಗೆ ಕಾಲಿನಿಂದ ಒದ್ದಿದ್ದಾನೆ. ಇಷ್ಟೇ ಅಲ್ಲದೇ ಆಕೆಯನ್ನು ಹಿಡಿದಳು ದೂರಕ್ಕೆ ಎಸೆದಿದ್ದಾನೆ. ಈ ವೇಳೆ ಇತರ ರೋಗಿಗಳು ಮಧ್ಯಪ್ರವೇಶಿಸಿದ್ದಾರೆ. ವೈದ್ಯರು ಆಗಮಿಸಿದ್ದಾರೆ. ಹಲವರು ಪ್ರಯತ್ನದಿಂದ ಮಹಿಳಾ ರೆಸೆಪ್ಶನಿಸ್ಟ್‌ನನ್ನು ರಕ್ಷಿಸಿದ್ದಾರೆ. ಇತ್ತ ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಇದೀಗ ಶೋಧ ಕಾರ್ಯ ನಡೆಯುತ್ತಿದೆ.
ಕೆಲವೊಮ್ಮೆ ಈ ರಿಸೆಪ್ಶನ್ಗಳು ದೊಡ್ಡ ಡಾಕ್ಟರ್ ಗಳ ಹಾಗೆ ಮಾಡುತ್ತಾರೆ ನನಗೂ ತುಂಬಾ ಸಲ ಅನುಭವವಾಗಿದೆ ಮೊನ್ನೆ ನಾನು ನಾಲ್ಕು ಗಂಟೆಗೆ ಡಾ.ಅನ್ನು ಭೇಟಿಯಾಗಲಿಕ್ಕೆ ಹೋಗಿದ್ದೆ ನನ್ನನ್ನು ಒಳಗೆ ಬಿಟ್ಟದ್ದು ಸಂಜೆ 7:30 ಗಂಟೆಗೆ ನನ್ನ ನಂತರ ಬಂದವರಿಗೆ ದೊಡ್ಡ ವ್ಯಕ್ತಿಗಳಿಗೆ ಒಳಗೆ ಬಿಟ್ಟಿದ್ದರು