ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ನಗರದ ನಾಗುರಿ ‘ಕುಕ್ಕರ್ ಬಾಂಬ್’ ಸ್ಫೋಟ ಪ್ರಕರಣದ ಹಿನ್ನೆಲೆ ಬಗ್ಗೆ ಬಗೆದಷ್ಟು ಹೊಸ ಮಾಹಿತಿಗಳು ಹೊರ ಬೀಳುತ್ತಿವೆ.
ಸ್ಫೋಟ ಪ್ರಕರಣದ ಆರೋಪಿ ಉಗ್ರ ಮುಹಮ್ಮದ್ ಶಾರಿಕ್, ಭಾರತದಲ್ಲಿ ನಿಷೇಧವಾಗಿರುವ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಮುಖ್ಯಸ್ಥ, ಝಾಕಿರ್ ನಾಯ್ಕ್‌ನಿಂದ ಪ್ರಭಾವಿತಗೊಂಡಿದ್ದ ಎಂಬುದು ಬೆಳಕಿಗೆ ಬಂದಿದೆ.
ಉಗ್ರ ಶಾರಿಕ್‌ನ ಮೊಬೈಲ್‌ನಿಂದ ಈ ವಿಚಾರ ದೃಢಪಟ್ಟಿದೆ. ಶಾರಿಕ್‌ನ ಮೊಬೈಲ್‌ನಲ್ಲಿ ಉಗ್ರ ಝಾಕಿರ್ ನಾಯ್ಕ್ ಭಾಷಣ ದ ವಿಡಿಯೋಗಳು, ಸೆಲ್ಫಿಗಳು ಪತ್ತೆಯಾಗಿದೆ. ಜತೆಗೆ ಬಾಂಬ್ ಹೇಗೆ ತಯಾರಿ ಸುವುದು ಎಂಬ ಕುರಿತ ವಿಡಿಯೋ ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.