ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಾರ್ಡ್ಸ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡ 2ನೇ ಇನ್ನಿಂಗ್ಸ್‌ನಲ್ಲಿ ಕೇವಲ 192 ರನ್‍ಗೆ ಆಲೌಟ್ ,ಆಗಿದ್ದು,ಭಾರತಕ್ಕೆ 193 ರನ್ ಟಾರ್ಗೆಟ್ ಸಿಕ್ಕಿದೆ.
ಇಂಗ್ಲೆಂಡ್ 2ನೇ ಇನ್ನಿಂಗ್ಸ್‌ನಲ್ಲಿ ಭಾರತಕ್ಕೆ ಬೃಹತ್ ಟಾರ್ಗೆಟ್ ನೀಡಲು ಪ್ಲಾನ್ ಮಾಡಿತ್ತು. ಆದರೆ ವಾಶಿಂಗ್ಟನ್ ಸುಂದರ್ ಮೋಡಿಗೆ ಇಂಗ್ಲೆಂಡ್ ಬಲಿಯಾಯಿತು. ಒಂದೆಡೆ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ವೇಗ ದಾಳಿ ನಡೆಸಿದರೆ, ಮತ್ತೊದೆಡೆ ನಿತಿಶ್ ರೆಡ್ಡಿ ಹಾಗೂ ಆಕಾಶ್ ದೀಪ್ ಉತ್ತಮ ದಾಳಿ ಸಂಘಟಿಸಿದರು. ಇತ್ತ ವಾಶಿಂಗ್ಟನ್ ಸುಂದರ್ 4 ವಿಕೆಟ್ ಕಬಳಿಸಿ ಇಂಗ್ಲೆಂಡ್ ತಂಡಕ್ಕೆ ಶಾಕ್ ನೀಡಿದರು.
ಜೋ ರೂಟ್ 40 ರನ್, ನಾಯಕ ಬೆನ್ ಸ್ಟೋಕ್ಸ್ 33 ರನ್ ಹ್ಯಾರಿ ಬ್ರೂಕ್ 23 ಹಾಗೂ ಜ್ಯಾಕ್ ಕ್ರಾವ್ಲೆ 22 ರನ್ ಸಿಡಿಸಿದರು. ಇನ್ನುಳಿ ಬ್ಯಾಟರ್ ರನ್ ಗಳಿಸಲು ಪರದಾಡಿದರು.
ಸುಂದರ್ 4, ಬುಮ್ರಾ, ಸಿರಾಜ್ ತಲಾ 2 ಹಾಗೂ ನೀತೀಶ್ ರೆಡ್ಡಿ, ಅಕಾಶ್ ದೀಪ್ ತಲಾ 1 ವಿಕೆಟ್ ಕಬಳಿಸಿದರು.