ಹೊಸದಿಗಂತ ಡಿಜಿಟಲ್ ಡೆಸ್ಕ್:
ನಂಜುಂಡೇಶ್ವರ ಉತ್ಸವ ಮೂರ್ತಿಗೆ ಎಂಜಿಲು ನೀರು ಎರಚಿದ ಆರೋಪದ ಮೇಲೆ ಐವರ ವಿರುದ್ಧ ದೂರು ದಾಖಲಾಗಿದೆ.
ಅಂಧಕಾಸುರನ ಸಂಹಾರಕ್ಕೆ ದಲಿತ ಸಂಘರ್ಷ ಸಮಿತಿ ವಿರೋಧ ವ್ಯಕ್ತಪಡಿಸಿತ್ತು. ಮಹಿಷಾಸುರ ನಮ್ಮ ರಾಜ ಆತನಿರುವ ರಂಗೋಲಿ ಹಾಳುಮಾಡಿ, ಬ್ಯಾನರ್ ಹರಿದು ಹೋಗುವುದಕ್ಕೆ ವಿರೋಧಿಸಿತ್ತು.
ಈ ವೇಳೆ ಇದು ತಲತಲಾಂತರಗಳಿಂದ ಮಾಡಿದ ಆಚರಣೆ ಎಂದು ನಂಜುಂಡೇಶ್ವರನ ಭಕ್ತರು ಮಾತನಾಡಿದ್ದಾರೆ. ಮಾತಿಗೆ ಮಾತು ಉಂಟಾಗಿ ಘರ್ಷಣೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಉತ್ಸವ ಮೂರ್ತಿ ಮೇಲೆ ಎಂಜಲು ನೀರು ಎರಚಿದ್ದಾರೆ ಎಂದು ಆರೋಪಿಸಲಾಗಿದೆ.