ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುನಿರೀಕ್ಷಿತ ಐಪಿಎಲ್ ಹರಾಜು ನಾಳೆಯಿಂದ ಆರಂಭವಾಗಲಿದ್ದು, ಭಾರೀ ಕುತೂಹಲ ಎದುರಾಗಿದೆ.
ಭಾರತ ಹಾಗೂ ವಿದೇಶಿ ಆಟಗಾರರು ಸೇರಿ ಒಟ್ಟಾರೆ 333 ಆಟಗಾರರು ಹರಾಜಿನಲ್ಲಿ ಇರಲಿದ್ದಾರೆ. ಭಾರತದ 214 ಆಟಗಾರರು ಹಾಗೂ ವಿದೇಶದ 119 ಆಟಗಾರರು ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ.
ಈ ಬಾರಿ ಮಿನಿ ಹರಾಜು ನಡೆಯಲಿದೆ, ಈಗಾಗಲೇ 20 ಕೋಟಿಯವರೆಗೂ ಬಿಡ್ಡಿಂಗ್ ನಡೆಯಲಿದೆ ಎನ್ನಲಾಗಿದೆ. ನಾಳೆ ದುಬೈನ ಕೋಕಾ ಕೋಲಾ ಅರೆನಾದಲ್ಲಿ ಆಕ್ಷನ್ ನಡೆಯಲಿದೆ. ದುಬೈನಲ್ಲಿ 11:30 ಕ್ಕೆ ಆರಂಭವಾಗಲಿದೆ, ಭಾರತದಲ್ಲಿ 1 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಸ್ಪೋರ್ಟ್ಸ್ ಚಾನೆಲ್‌ಗಳಲ್ಲಿ ಹರಾಜು ಪ್ರಸಾರವಾಗಲಿದೆ. ಇನ್ನು ಜಿಯೋ ಚಿನಿಮಾ ಹಾಗೂ ಇನ್ನಿತರ ಆಪ್‌ಗಳಲ್ಲಿ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದಾಗಿದೆ.