ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುವಕನೋರ್ವ ಸ್ಕೈವಾಕ್ ಛಾವಣಿಯ ಮೇಲೆ ಹತ್ತಿ ರಾದ್ಧಾಂತ ಸೃಷ್ಟಿಸಿದ್ದಾನೆ. ಆತನನ್ನು ಹಿಡಿಯಲು ಹೋದ ಐವರು ಸುಸ್ತೋ ಸುಸ್ತಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮುಂಬೈನ ಗವ್ದೇವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಯುವಕನ ಹೆಸರು ಶಕೀಲ್ ಅಹಿಯಾ (24) ಎಂದು ಗುರುತಿಸಲಾಗಿದೆ. ಈತ ಮಾದಕ ವ್ಯಸನಿಯಾಗಿದ್ದು, ಅಮಲಿನಲ್ಲಿ ಸ್ಕೈವಾಕ್ನ ಛಾವಣಿಯ ಮೇಲೆ ಹತ್ತಿ ಗಲಾಟೆ ಮಾಡಿದ್ದಾಗಿ ಬೆಳಕಿಗೆ ಬಂದಿದೆ.
ಮಾದಕ ದ್ರವ್ಯ ನಿಯಂತ್ರಣ ಕಾಯ್ದೆಯಡಿ ಆತನನ್ನು ತನಿಖೆ ನಡೆಸಲಾಗುತ್ತಿದೆ. ಸ್ಕೈವಾಕ್ನ ಛಾವಣಿಯ ಮೇಲೆ ಯುವಕನನ್ನು ಗುರುತಿಸಿದ ಅಧಿಕಾರಿಗಳು ಆತನನ್ನು ಕೆಳಗಿಳಿಸಲು ಐವರನ್ನು ಕಳಿಸಿದ್ದಾರೆ. ಈ ವೇಳೆ ಮಾಳಿಗೆಯ ಮೇಲೆ ಕುಳಿತು ಕೆಳಗಿಳಿಯುವುದಿಲ್ಲ ಎಂದು ಮುಂದಕ್ಕೆ ಹೆಜ್ಜೆ ಹಾಕದೆ ಸಿಬ್ಬಂದಿಗೆ ಕಿರಿಕಿರಿ ಉಂಟು ಮಾಡಿದ್ದಾನೆ. ಸತತ ಎರಡು ಗಂಟೆಗಳ ಕಾಲ ಹರಸಾಹಸ ಪಟ್ಟು ಯುವಕನನ್ನು ಕೆಳಗಿಳಿಸಲಾಯಿತು.
#Mumbai skywalk पर चढ़े एक युवक को पकड़ने की
रोंगटे खड़े कर देने वाली तस्वीर!@MumbaiPolice और दमकल विभाग के जवानों को तकरीबन डेढ़ घंटे लगे युवक को समझाकर सुरक्षित नीचे उतारने में। तब तक नीचे सड़क पर ट्राफिक रोक कर रखना पड़ा था।
पुलिस के मुताबिक युवक ड्रग्स के नशे में था। pic.twitter.com/fI9AspmFAL— sunilkumar singh (@sunilcredible) October 20, 2022