ಹೊಸದಿಗಂತ ಡಿಜಿಟಲ್ ಡೆಸ್ಕ್:
ವೀಕೆಂಡ್ ವಿತ್ ರಮೇಶ್‌ನ ಹೊಸ ಸೀಸನ್ ಶುರುವಾಗಿದ್ದು, ಮೊದಲ ಎಪಿಸೋಡ್‌ನಲ್ಲಿ ಮೋಹಕ ತಾರೆ ರಮ್ಯಾ ಕಾಣಿಸಿಕೊಂಡಿದ್ದರು.
ರಮ್ಯಾ ಕಂ ಬ್ಯಾಕ್ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದ ಜನರಿಗೆ ಶೋನಲ್ಲಿ ರಮ್ಯಾ ಕನ್ನಡ ಮಾತನಾಡಿಲ್ಲ ಅನ್ನೋದು ಇಷ್ಟವಾಗಿಲ್ಲ. ಹೆಚ್ಚು ಇಂಗ್ಲಿಷ್‌ನಲ್ಲಿ ಮಾತನಾಡಿದ್ದು ಅರ್ಧದಷ್ಟು ಜನಕ್ಕೆ ಕಾರ್ಯಕ್ರಮ ಅರ್ಥವೇ ಆಗಿಲ್ಲ ಎಂದು ರಮ್ಯಾರನ್ನು ಟ್ರೋಲ್ ಮಾಡಲಾಗಿತ್ತು.
ಇದಕ್ಕೆ ಉತ್ತರಿಸಿದ ರಮ್ಯಾ ಯಾರೂ ಸೀರಿಯಸ್ ಆಗಬೇಡಿ, ಇದೊಂದು ಕಾರ್ಯಕ್ರಮ. ಕೆಲವು ಗೆಸ್ಟ್‌ಗಳಿಗೆ ಕನ್ನಡ ಬರುತ್ತಿರಲಿಲ್ಲ, ಅವರಿಗಾಗಿ ಸ್ವಲ್ಪ ಇಂಗ್ಲಿಷ್ ಮಾತನಾಡಿದೆ. ಅಜ್ಜಿಯರಿಗೆ ಕಾರ್ಯಕ್ರಮ ಅರ್ಥವಾಗಿಲ್ವಾ? ನೆಕ್ಸ್ ಟೈಮ್ ಎಲ್ಲಿ ಹೋದ್ರೂ ಕನ್ನಡದಲ್ಲೇ ಮಾತನಾಡ್ತೀನಿ ಅಜ್ಜಿಯಂದರೆ ನಿಮಗೋಸ್ಕರ ಎಂದು ರಮ್ಯಾ ಹೇಳಿದ್ದಾರೆ.