ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಆಕ್ಸಿಯಂ-4 ಮಿಷನ್ ಕಾರ್ಯಾಚರಣೆಯ ಭಾಗವಾಗಿ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿರುವ ಭಾರತೀಯ ವಾಯುಪಡೆಯ (IAF) ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದು ಸಂವಾದ ನಡೆಸಿದ್ದಾರೆ.
ಸುಮಾರು 18 ನಿಮಿಷಗಳ ಕಾಲ ಮಾತುಕತೆಯಲ್ಲಿ ಪ್ರಧಾನಿ ಮೋದಿ-ಶುಕ್ಲಾ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ.
ಭೂಮಿಯ ಯಾವ ಭಾಗದ ಮೇಲೆ ಪ್ರಯಾಣ ಮಾಡ್ತಿದ್ದೀರಿ? ಅಂತ ಮೋದಿ ಕೇಳಿದ್ದಕ್ಕೆ ಈ ಕ್ಷಣದಲ್ಲಿ ನಿರ್ದಿಷ್ಟವಾಗಿ ಹೇಳಲು ಸಾಧ್ಯವಾಗ್ತಿಲ್ಲ. ಆದರೆ ಈಗ ಪ್ರತಿ ಗಂಟೆಗೆ 18,000 ವೇಗದಲ್ಲಿ ಪ್ರಯಾಣ ಮಾಡುತ್ತಿದ್ದೇವೆ. 16 ಬಾರಿ ಸೂರ್ಯೋದಯ, ಸೂರ್ಯಾಸ್ತ ನೋಡುತ್ತಿದ್ದೇವೆ. ಭೂಮಿಗೆ ಯಾವುದೇ ಗಡಿ ಕಾಣುವುದಿಲ್ಲ. ಭಾರತ ಮ್ಯಾಪ್‌ನಲ್ಲಿ ನೋಡುವುದಕ್ಕಿಂತ ದೊಡ್ಡದಾಗಿ ಕಾಣುತ್ತೆ. ಭಾರತ ಬಹಳ ಅದ್ಭುತವಾಗಿ ಕಾಣುತ್ತೆ. ರಾಜ್ಯ ದೇಶಗಳ ಗಡಿ ಕಾಣಲ್ಲ ಅಂತ ತಮಗಾದ ಅನುಭವ ಹಂಚಿಕೊಂಡರು.
ಈಗ ಪರಿಸ್ಥಿತಿ ಹೇಗಿದೆ? ಅಂತ ಕೇಳಿದ್ರು. ಇದಕ್ಕೆ ಉತ್ತರಿಸಿದ ಶುಕ್ಲಾ, ಇಲ್ಲಿ ಗುರುತ್ವಾಕರ್ಷಣೆ ಇರುವುದಿಲ್ಲ. ಸಾಕಷ್ಟು ಸಮಸ್ಯೆಯಾಗುತ್ತದೆ. ನಿಮ್ಮ ಜೊತೆಗೆ ಮಾತನಾಡುವಾಗ ಕಾಲನ್ನು ಕಟ್ಟಿಕೊಂಡಿದ್ದೇವೆ ಅಂತ ಮೈಕ್ ತೋರಿಸಿ ಗುರುತ್ವಾಕರ್ಷಣೆಯ ಬಗ್ಗೆ ವಿವರಣೆ ನೀಡಿದರು.
ಪ್ರಧಾನಿಯವರು ಇಲ್ಲಿಯವರೆಗೆ ನೋಡಿದ್ದೇನು ಎಂಬುದನ್ನು ವಿವರಿಸಲು ಕೇಳಿದಾಗ ಶುಕ್ಲಾ, ಸ್ವಲ್ಪ ಸಮಯದ ಹಿಂದೆ, ನಾನು ಕಿಟಕಿಯಿಂದ ಹೊರಗೆ ನೋಡುತ್ತಿದ್ದಾಗ, ನಾವು ಹವಾಯಿಯ ಮೇಲೆ ಹಾರುತ್ತಿದ್ದೆವು. ನಮ್ಮ ರಾಷ್ಟ್ರವು ಬಹಳ ವೇಗದಲ್ಲಿ ಮುಂದುವರಿಯುತ್ತಿದೆ ಎಂದು ಹೇಳಿದ್ದಾರೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದದಿಂದ, ನಾನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದ್ದೇನೆ. ಇಲ್ಲಿ ನಿಲ್ಲುವುದು ಸುಲಭವಾಗಿ ಕಾಣುತ್ತದೆ, ಆದರೆ ನನ್ನ ತಲೆ ಸ್ವಲ್ಪ ಭಾರವಾಗಿದೆ, ಕೆಲವು ತೊಂದರೆಗಳನ್ನು ಎದುರಿಸುತ್ತಿದೆ; ಆದರೆ ಇವು ಸಣ್ಣ ಸಮಸ್ಯೆಗಳಾಗಿವೆ ಎಂದು ಶುಕ್ಲಾ ಹೇಳಿದ್ದಾರೆ.