ಸಿಲಿಕಾನ್ ಸಿಟಿಯಲ್ಲಿ ಕಾಡುತ್ತಿದೆ ನೀರಿನ ಸಮಸ್ಯೆ: ಜಲಮಂಡಳಿಯಿಂದ ಬೋರ್ ​ವೆಲ್​​ಗಳಿಗೆ​ ಅನುಮತಿ ನಿರಾಕರಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಲಿಕಾನ್ ಸಿಟಿಯಲ್ಲಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚಿದ್ದು, ಹೀಗಾಗ ಜಲ ಮಂಡಳಿ ನೀರನ್ನು ಹೇಗಾದರೂ ಮಾಡಿ ಉಳಿಸಲು ಸರ್ಕಸ್ ಮಾಡುತ್ತಿದೆ. ಸದ್ಯಕ್ಕೆ ಹೊಸ ಬೋರ್​ವೆಲ್​ ಕೊರೆಸುವ ಕುರಿತು ಬಂದ ಅರ್ಜಿಗಳಿಗೆ ಅನುಮತಿ ನೀಡಲು ಜಲ ಮಂಡಳಿ ನಿರಾಕರಣೆ ಮಾಡಿದೆ.

ಸಿಲಿಕಾನ್​ ಸಿಟಿಯಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿರುವ ಕುರಿತು ಭಾರತೀಯ ವಿಜ್ಞಾನ ಸಂಸ್ಥೆ ಎಚ್ಚರಿಸಿದೆ. ಇದರಿಂದ ಬೇಸಿಗೆಯಲ್ಲಿ ನಗರದಲ್ಲಿ ನೀರಿನ ಸಮಸ್ಯೆ ತಲೆದೂರುತ್ತದೆ. ಇದಕ್ಕಾಗಿ ಹೊಸ ಬೋರ್​ವೆಲ್​​ಗಳಿಗೆ ಜಲ ಮಂಡಳಿ ಅನುಮತಿ ನೀಡಿಲ್ಲ.

ಪ್ರತಿ ತಿಂಗಳು 200 ರಿಂದ 400 ಹೊಸ ಬೋರ್ ವೆಲ್ ಅರ್ಜಿ ಬರುವುದು ಸಾಮಾನ್ಯ. ಆದರೆ ಈಗ ಬೇಸಿಗೆ ಆರಂಭವಾಗುವುದರಿಂದ 600 ಅರ್ಜಿಗಳು ಸಲ್ಲಿಕೆ ಆಗಿದ್ದು ಇದರಲ್ಲಿ ಕೇವಲ 30 ಹೊಸ ಬೋರ್​ವೆಲ್​ಗೆ ಮಾತ್ರ ಅನುಮತಿ ನೀಡಲಾಗಿದೆ. ಉಳಿದವುಗಳಿಗೆ ಪರ್ಮಿಷನ್ ನೀಡಿಲ್ಲ.

ಕಳೆದ ವರ್ಷ 2024 ರಲ್ಲಿ ಜಲಮಂಡಳಿಗೆ 2,835 ಅರ್ಜಿಗಳು ಸಲ್ಲಿಕೆ ಆಗಿದ್ದವು, ಈ ಪೈಕಿ ಬೇಸಿಗೆಯಲ್ಲಿ 1,634 ಅರ್ಜಿಗಳು ಬಂದಿದ್ದರೇ, ಇದರಲ್ಲಿ 1273 ಅರ್ಜಿಗಳಿಗೆ ಜಲ ಮಂಡಳಿ ಅನುಮತಿ ನೀಡಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!