ಐಪಿಎಲ್‌ನ್ನೂ ಬಿಡುತ್ತಿಲ್ಲ ನೀರಿನ ಸಮಸ್ಯೆ: ಬೆಂಗಳೂರಿನ ಪಂದ್ಯಗಳನ್ನು ಸ್ಥಳಾಂತರಿಸುವಂತೆ ಆಗ್ರಹ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇನ್ನೇನು ಐಪಿಎಲ್ ಕ್ರೇಝ್ ಶುರುವಾಗೋಕೆ ಕೆಲವೇ ದಿನಗಳು ಬಾಕಿ ಇವೆ, ತಮ್ಮ ತಂಡ ಆರ್‌ಸಿಬಿಯನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೋಡುವ ತವಕ ಎಲ್ಲ ಕ್ರೀಡಾಭಿಮಾನಿಗಳಲ್ಲೂ ಇದೆ.

ಆದರೆ ಇದಕ್ಕೆ ಜಲಕಂಟಕದ ಸಮಸ್ಯೆ ಎದುರಾಗಿದೆ. ಇದೇ ತಿಂಗಳ 22 ರಿಂದ ಐಪಿಎಲ್ ಆರಂಭವಾಗಲಿದೆ. 29ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.

ಇದಕ್ಕಾಗಿ ಜನ ಉತ್ಸುಕರಾಗಿದ್ದಾರೆ. ಆದರೆ ಬೆಂಗಳೂರಿನಲ್ಲಿ ನೀರಿಲ್ಲದ ಪರಿಸ್ಥಿತಿಯನ್ನು ಗಮದಲ್ಲಿಟ್ಟುಕೊಂಡು, ಪಂದ್ಯಗಳನ್ನು ಬೇರೆ ಕಡೆ ಶಿಫ್ಟ್ ಮಾಡಿ ಎಂದು ಹೇಳಲಾಗುತ್ತಿದೆ.

ಒಂದು ಪಂದ್ಯಕ್ಕಾಗಿ ಲಕ್ಷಾಂತರ ಲೀಟರ್ ನೀರು ಬೇಕಾಗಿದೆ. ಆದರೆ ಬೆಂಗಳೂರಿನಲ್ಲಿ ಕುಡಿಯೋದಕ್ಕೂ ನೀರಿಲ್ಲ. ಕೆಲ ವರ್ಷಗಳ ಹಿಂದೆ ಮಹಾರಾಷ್ಟ್ರದಲ್ಲಿ ನೀರಿಲ್ಲದೆ ಪಂದ್ಯಗಳನ್ನು ಶಿಫ್ಟ್ ಮಾಡಲಾಗಿತ್ತು. ಇದೀಗ ನಮ್ಮ ರಾಜ್ಯದಲ್ಲಿರುವ ಪಂದ್ಯಗಳನ್ನು ಬೇರೆಡೆಗೆ ಶಿಫ್ಟ್ ಮಾಡಿ ಎನ್ನುವ ಅಭಿಯಾನ ಟ್ವಿಟರ್‌ನಲ್ಲಿ ಆರಂಭವಾಗಿದೆ.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಟ್ಯಾಗ್ ಮಾಡಿ ಪಂದ್ಯ ಬೇರೆಡೆಗೆ ಶಿಫ್ಟ್ ಮಾಡಿಸಿ ಎಂದು ಕೇಳಿಕೊಳ್ಳುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!