ಹೊಸದಿಗಂತ ಡಿಜಿಟಲ್ ಡೆಸ್ಕ್:
ನೀವು ಪ್ರೀತಿಯಲ್ಲಿ ಬಿದ್ದಾಗ ಚಾಟಿಂಗ್, ಡೇಟಿಂಗ್, ಸಿನಿಮಾ, ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಆದರೆ ಒಮ್ಮೆ ಬ್ರೇಕಪ್ ಆದರೆ ಮನಸ್ಸು ಛಿದ್ರವಾಗುತ್ತದೆ. ಅದಕ್ಕೂ ಮುನ್ನ ಮನೆಯಲ್ಲಿ ಇರಲಾಗದೆ ಅಲೆದಾಡುತ್ತಿದ್ದವರು ಕೊಠಡಿಯಿಂದ ಹೊರಗೆ ಬಾರದೆ ಡಿಪ್ರೆಶನ್ ಹೋಗುವವರೂ ಇದ್ದಾರೆ. ಕೆಲವರು ಪ್ರಾಣ ಕೂಡ ಕಳೆದುಕೊಳ್ಳುತ್ತಾರೆ. ಇಂತಹ ದುರಂತಗಳಿಗೆ ಕೈ ಹಾಕದೆ ಅದರಿಂದ ಹೊರಗೆ ಬಂದು ಹೊಸ ಜೀವನ ಶುರು ಮಾಡಬೇಕು. ಅದಕ್ಕೆ ಈ ಕೆಲ ಟಿಪ್ಸ್ ಫಾಲೋ ಮಾಡಿ.
ಸ್ವಲ್ಪ ಸಮಯ ತೆಗೆದುಕೊಳ್ಳಿ: ಬ್ರೇಕಪ್‌ನಿಂದ ಹೊರಬರುವುದು ಅಂದುಕೊಂಡಷ್ಟು ಸುಲಭವಲ್ಲ. ಆದರೆ ಅದು ಕಷ್ಟವೂ ಅಲ್ಲ, ಅಸಾಧ್ಯವೂ ಅಲ್ಲ. ಆದ್ದರಿಂದ ಸಮಯ ತೆಗೆದುಕೊಳ್ಳಿ. ಎಷ್ಟು ಸರಿ ಎಷ್ಟು ತಪ್ಪು ಎಂದು ಯೋಚಿಸಿ. ನಿನ್ನ ತಪ್ಪಿಲ್ಲದಿದ್ದರೆ ನಾನು ಮಾಡದ ತಪ್ಪಿಗೆ ನಾನೇಕೆ ನರಳಬೇಕು. ಆ ನೋವಿನಿಂದ ನನ್ನ ಬದುಕೇಕೆ ಹಾಳು ಮಾಡಿಕೊಳ್ಳಬೇಕು? ಎಂದು ಯೋಚನೆ ಮಾಡಿ. ಕಾಲಾವಕಾಶ ನೀಡಿ ಯೋಚಿಸಿದರೆ ಎಲ್ಲವೂ ಅರ್ಥವಾಗುತ್ತದೆ.
ಮನಸಿನ ನೋವನ್ನು ಹಂಚಿಕೊಳ್ಳಿ: ಮನಸಿನ ನೋವನ್ನು ಹಂಚಿಕೊಂಡರೆ ದುಃಖ ಕಡಿಮೆಯಾಗುತ್ತದೆ ಎಂಬ ಮಾತಿದೆ. ಆದ್ದರಿಂದ ನಿಮ್ಮ ಸ್ನೇಹಿತರು, ಹಿತೈಷಿಗಳೊಂದಿಗೆ ಹಂಚಿಕೊಳ್ಳಿ.
ಮನಸಾರೆ ಅತ್ತುಬಿಡಿ: ಒಬ್ಬರೇ ಕೂತು ಮನಸಾರೆ ಅತ್ತು ಮನಸ್ಸನ್ನು ಹಗುರ ಮಾಡಿಕೊಳ್ಳಿ. ಆ ನೋವನ್ನು ಎಷ್ಟು ಮರೆಮಾಚುತ್ತೀರೋ ಅಷ್ಟು ಬೆಳೆಯುತ್ತದೆ. ಆದ್ದರಿಂದ ದುಃಖ ತಡೆದಿಟ್ಟುಕೊಳ್ಳದೆ ಕಣ್ಣೀರಿನ ಮೂಲಕ ಹೊರಹಾಕಿ.
ವಿಭಿನ್ನವಾಗಿ ಯೋಚಿಸಿ: ನೋವಿನಿಂದ ಹೊರಬರಲು ನೀವು ಬಯಸಿದರೆ, ನಿಮ್ಮಲ್ಲಿ ಅಡಗಿರುವ ಕೌಶಲ್ಯವನ್ನು ಹೊರತೆಗೆಯಿರಿ. ನೆಚ್ಚಿನ ಕೆಲಸಗಳನ್ನು ಮಾಡಿ. ತಡಮಾಡಬೇಡಿ..
ಹಳೆಯ ಗುರುತುಗಳನ್ನು ತೊಡೆದುಹಾಕಿ: ನಿಮ್ಮ ಪ್ರೇಮಿಯ ಎಲ್ಲಾ ವಸ್ತುಗಳು ಮತ್ತು ಗುರುತುಗಳನ್ನು ತೊಡೆದುಹಾಕಿ. ಅವರು ಉಡುಗೊರೆಗಳನ್ನು ಆದಷ್ಟು ಬಿಸಾಡಿ.. ಅವು ದೂರವಿದ್ದಷ್ಟು ಮನಸಿಗೆ ನೆಮ್ಮದಿ.
ದುಷ್ಚಟಗಳತ್ತ ಹೆಜ್ಜೆ ಹಾಕಬೇಡಿ: ಬ್ರೇಕ್ ಅಪ್ ಆದ ನಂತರ ಅನೇಕರು ಕುಡಿತದ ಚಟಕ್ಕೆ ಬೀಳುತ್ತಾರೆ. ಆ ಅಮಲಿನಲ್ಲಿ ಮರೆಯಲು ಬಯಸುತ್ತಾರೆ. ಹಾಗಾಗಿ ಮದ್ಯಪಾನ ಮತ್ತು ಧೂಮಪಾನದ ಚಟಕ್ಕೆ ಬೀಳದಂತೆ ಎಚ್ಚರವಹಿಸಿ. ಚಟಗಳಿಂದ ಆರೋಗ್ಯ ಹದಗೆಡುವುದು ಬಿಟ್ಟರೆ ಬೇರೆ ಉಪಯೋಗವಿಲ್ಲ. ಹಾಗಾಗಿ ಇವುಗಳಿಂದ ದೂರವಿರಿ.
ಹೊಸಬರನ್ನು ಭೇಟಿ ಮಾಡಿ: ಬ್ರೇಕಪ್ ಆದ ಕಾರಣ ಮನೆಯಲ್ಲೇ ಇರಬೇಡಿ. ಹೊಸ ಜನರನ್ನು ಭೇಟಿಯಾಗುವುದು ಮತ್ತು ಹೊಸ ಸ್ಥಳಗಳಿಗೆ ಹೋಗುವುದು ಮನಸ್ಸನ್ನು ಹಗುರಗೊಳಿಸುತ್ತದೆ. ಒಂದೇ ಪ್ರದೇಶದಲ್ಲಿ ಉಳಿದರೆ ಅದೇ ಆಲೋಚನೆಗಳಿಂದ ವಿಚಲಿತರಾಗಬಹುದು. ನೀವು ಹೊಸ ಜನರನ್ನು ಭೇಟಿಯಾದರೆ, ನೀವು ಹೊಸ ವಿಷಯಗಳನ್ನು ಕಲಿಯುವಿರಿ. ಹೊಸ ಜಾಗಕ್ಕೆ ಹೋದಾಗ ನಮಗೆ ಅರಿವಿಲ್ಲದೇ ಮನಸ್ಸು ಬದಲಾಗುತ್ತದೆ. ಹಳೆಯ ಆಲೋಚನೆಗಳೆಲ್ಲ ದೂರವಾಗಿ ಹೊಸ ಉತ್ಸಾಹ ಬರುತ್ತದೆ. ಹೊಸ ಆಲೋಚನೆಗಳು ಹುಟ್ಟುತ್ತವೆ.