WCL: ಭಾರತ-ಪಾಕ್ ಪಂದ್ಯ ರದ್ದು: ಪೂರ್ತಿ ಅಂಕ ನಮಗೆ ಕೊಡಿ ಎಂದ ಪಾಕ್! ಏನಿದು ಹೊಸ ವರಸೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯ ಪ್ರಮುಖ ಭಾರತ-ಪಾಕಿಸ್ತಾನ್ ಪಂದ್ಯ ರದ್ದಾದ ಹಿನ್ನೆಲೆಯಲ್ಲಿ ಇದೀಗ ಹೊಸ ವಿವಾದ ಸೃಷ್ಟಿಯಾಗಿದೆ. ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ಜುಲೈ 20 ರಂದು ಈ ಪಂದ್ಯ ನಡೆಯಬೇಕಿತ್ತು. ಆದರೆ ಭಾರತ ತಂಡದ ಪ್ರಮುಖ ಆಟಗಾರರು ಕಣಕ್ಕೆ ಇಳಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರಿಂದ ಪಂದ್ಯವನ್ನೇ ರದ್ದುಗೊಳಿಸಲಾಗಿತ್ತು.

ಈ ಸಂಬಂಧವಾಗಿ ಪಾಕಿಸ್ತಾನ್ ಚಾಂಪಿಯನ್ಸ್ ತಂಡದ ಮಾಲೀಕರಾದ ಕಾಮಿಲ್ ಖಾನ್ ಅವರು ಪ್ರತಿಕ್ರಿಯೆ ನೀಡಿದ್ದು, “ನಾವು ಈ ಪಂದ್ಯಕ್ಕೆ ಸಂಪೂರ್ಣ ಸಿದ್ಧರಾಗಿದ್ದೆವು. ಆದರೆ ಭಾರತೀಯ ಆಟಗಾರರ ಹಿಂದೇಟು ಹಾಕಿದ್ದರಿಂದ ಪಂದ್ಯವೇ ನಡೆಯಲಿಲ್ಲ. ಹೀಗಾಗಿ ನಮ್ಮ ತಂಡಕ್ಕೆ ಪೂರ್ಣ 2 ಅಂಕಗಳನ್ನು ನೀಡಬೇಕು” ಎಂದು ಹೇಳಿದ್ದಾರೆ. ಸಾಮಾನ್ಯವಾಗಿ ಪಂದ್ಯ ರದ್ದಾದರೆ ಉಭಯ ತಂಡಗಳಿಗೆ ಒಂದೊಂದು ಅಂಕಗಳನ್ನು ನೀಡುವುದು ರೂಢಿಯಾಗಿದೆ. ಆದರೆ ಪಾಕ್ ತಂಡ ಈ ನಿಯಮವನ್ನು ಪ್ರಶ್ನಿಸಿದೆ.

ಪಂದ್ಯ ರದ್ದುಮಾಡಲು ಕಾರಣವಾಗಿರುವವರು ಭಾರತೀಯ ಆಟಗಾರರೇ ಎಂಬ ದೃಷ್ಟಿಯಿಂದ ಪಾಕಿಸ್ತಾನ್ ಸಂಪೂರ್ಣ ಅಂಕಗಳನ್ನು ಕೋರುತ್ತಿದ್ದು, ಇದು ಆಯೋಜಕರನ್ನು ಗೊಂದಲಕ್ಕೆ ದೂಡಿದೆ. ಟೂರ್ನಿಯ ನಿಯಮಾನುಸಾರ, ಆಯೋಜಕರು ಉಭಯ ತಂಡಗಳಿಗೆ ಒಂದೊಂದು ಅಂಕ ನೀಡಲು ತೀರ್ಮಾನಿಸಿದ್ದರು. ಆದರೆ ಪಾಕ್ ತಂಡ ಅದಕ್ಕೆ ಒಪ್ಪಿಕೊಳ್ಳದೆ ಹೊಸ ಬೇಡಿಕೆ ಮುಂದಿಟ್ಟಿದೆ. ಇದೀಗ ಟೂರ್ನಿಯ ಆಯೋಜಕರು ಈ ಬೇಡಿಕೆಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಕಾದು ನೋಡಬೇಕಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!