ನಾವೆಲ್ಲರೂ ಈಗ ಚೆನ್ನಾಗಿದ್ದೇವೆ..: ಸೋನಾಕ್ಷಿ ಮದುವೆ ಕುರಿತು ಶತ್ರುಘ್ನ ಸಿನ್ಹಾ ರಿಯಾಕ್ಷನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಮದುವೆ ವಿಚಾರವಾಗಿ ಹುಟ್ಟಿದ ವದಂತಿಗಳ ಕುರಿತು ನಟ ,ರಾಜಕಾರಣಿ ಶತ್ರುಘ್ನ ಸಿನ್ಹಾ ಪ್ರತಿಕ್ರಿಯಿಸಿದ್ದಾರೆ.

ಜಹೀರ್ ಇಕ್ಬಾಲ್ ಜೊತೆ ಸೋನಾಕ್ಷಿ ಸಿನ್ಹಾ ಅವರ ಮದುವೆಯ ಬಗ್ಗೆ ತಮ್ಮ ಕುಟುಂಬದಲ್ಲಿ ಕೆಲವು ಒತ್ತಡಗಳಿವೆ ಎನ್ನುವುದನ್ನು ಶತ್ರುಘ್ನ ಸಿನ್ಹಾ ಒಪ್ಪಿಕೊಂಡಿದ್ದಾರೆ. ಈಗ ಎಲ್ಲಾ ಒತ್ತಡವನ್ನು ಪರಿಹರಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಜೂನ್ 23ರಂದು ಸೋನಾಕ್ಷಿಯ ಮದುವೆಯ ದಿನಾಂಕವಲ್ಲ. ಇದು ಅವಳ ಆರತಕ್ಷತೆಯ ದಿನಾಂಕವಾಗಿದೆ ಎಂದು ತಿಳಿಸಿದರು.

ಜೂನ್ 23ರಂದು ಸಂಜೆ ನಾವೆಲ್ಲರೂ ಮದುವೆಯ ಆರತಕ್ಷತೆಯಲ್ಲಿ ಭಾಗವಹಿಸುತ್ತಿದ್ದೇವೆ. ನನ್ನ ಕುಟುಂಬದ ಯಾರೂ ಮದುವೆಯ ಬಗ್ಗೆ ಏನನ್ನೂ ಹೇಳಲಿಲ್ಲ. ಕೆಲವು ಮಾಧ್ಯಮಗಳು ಕೇವಲ ವಿಷಯಗಳನ್ನು ಊಹಿಸುತ್ತಿವೆ. ಖಾಸಗಿ ಕೌಟುಂಬಿಕ ವಿಷಯದ ಬಗ್ಗೆ ಹೆಚ್ಚಿನ ಗಮನವನ್ನು ನೀಡಲಾಗುತ್ತಿದೆ ಎಂದು ಅವರು ವಿಷಾದಿಸಿದ್ದಾರೆ. ವಿವಾಹದ ಮೊದಲು ಘರ್ಷಣೆಗಳು ಸಾಮಾನ್ಯವಾಗಿದೆ. ನಾವೆಲ್ಲರೂ ಈಗ ಚೆನ್ನಾಗಿದ್ದೇವೆ. ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಅವರು ಹೇಳಿದರು.

ಶತ್ರುಘ್ನ ಸಿನ್ಹಾ ಅವರ ಮಗಳು ಎಂಬ ಕಾರಣಕ್ಕೆ ಸೋನಾಕ್ಷಿ ಜೀವನದಲ್ಲಿ ತನಗೆ ಬೇಕಾದುದನ್ನು ಪಡೆಯದೆ ತ್ಯಾಗ ಮಾಡಬಾರದು ಎಂದೇನಿಲ್ಲ. ನಾವು ಪೋಷಕರು ಏನೇ ಹೇಳಬಹುದು. ಆದರೆ ನಿರ್ಧಾರ ಅವರದ್ದು ಎಂದರು.

ಸೋನಾಕ್ಷಿಗೆ ತನ್ನ ಸಂಗಾತಿಯನ್ನು ಆಯ್ಕೆ ಮಾಡುವ ಎಲ್ಲಾ ಹಕ್ಕು ಇದೆ ಎಂದು ಹೇಳಿರುವ ಅವರು, ಸೋನಾಕ್ಷಿ ಮತ್ತು ಜಹೀರ್ ತಮ್ಮ ಜೀವನವನ್ನು ಒಟ್ಟಿಗೆ ಬದುಕಬೇಕು. ಅವರು ಒಟ್ಟಿಗೆ ತುಂಬಾ ಚೆನ್ನಾಗಿ ಕಾಣುತ್ತಾರೆ. ಸುಳ್ಳು ಸುದ್ದಿಗಳನ್ನು ಹೊರತರುತ್ತಿರುವವರು ಈ ಸಂತೋಷದಾಯಕ ಸಂದರ್ಭದಿಂದ ತುಂಬಾ ನಿರಾಶೆಗೊಂಡಿದ್ದಾರೆ. ಯಾಕೆಂದರೆ ಅವರು ಸುಳ್ಳನ್ನು ಹೊರತುಪಡಿಸಿ ಏನನ್ನೂ ಹರಡುತ್ತಿಲ್ಲ. ನಾನು ಅವರಿಗೆ ಎಚ್ಚರಿಕೆ ನೀಡಲು ಬಯಸುತ್ತೇನೆ. ಇದು ನಮ್ಮ‌ ಖಾಸಗಿ ವಿಷಯ ಎಂದು ಶತ್ರುಘ್ನ ಸಿನ್ಹಾ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!