ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣಗೆ ಇತ್ತೀಚೆಗೆ ಬೆಂಗಳೂರಿನಲ್ಲಿ ಕೆಟ್ಟ ಅನುಭವವೊಂದಾಗಿದ್ದು, ನಟಿ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿದ್ದಾರೆ.
ಕುಟುಂಬದವರ ಜೊತೆ ಊಟ ಮುಗಿಸಿ ಕಾರ್ನಲ್ಲಿ ವಾಪಾಸಾಗುವ ವೇಳೆ ಹೇಗೆ ಗುಂಪೊಂದು ಅವರ ಮೇಲೆ ಹಲ್ಲೆ ಮಾಡಿದೆ ಎಂದು ಹೇಳಿಕೊಂಡಿದ್ದಾರೆ. ಪೊಲೀಸರು ಸಹಾಯಕ್ಕೆ ಬಂದಿಲ್ಲ ಎಂದು ಹರ್ಷಿಕಾ ಆರೋಪಿಸಿದ್ದಾರೆ.
ಆಗಿದ್ದೇನು?
ಬೆಂಗಳೂರಿನ ಫ್ರೇಜರ್ ಟೌನ್ ಬಳಿ ಇರುವ ಪುಲಿಕೇಶಿ ನಗರದ ಮಸೀದಿ ರಸ್ತೆಯ ಕರಾಮಾ ಎನ್ನುವ ರೆಸ್ಟೋರೆಂಟ್ನಲ್ಲಿ ಹರ್ಷಿಕಾ ಕುಟುಂಬ ಊಟಕ್ಕೆ ತೆರಳಿದ್ದಾರೆ. ವಾಪಾಸ್ ಕಾರ್ನಲ್ಲಿ ಕೂತಾಗ ಇದ್ದಕ್ಕಿದ್ದಂತೆಯೇ ಇಬ್ಬರು ವ್ಯಕ್ತಿಗಳು ನಿಮ್ಮ ಕಾರ್ ಉದ್ದ ಇದೆ ನೋಡಿಕೊಂಡು ಗಾಡಿ ಓಡಿಸಿ ನಮಗೆ ತಾಗುತ್ತಿದೆ ಎಂದು ಹೇಳಿದ್ದಾರೆ. ಇದಕ್ಕೆ ಭುವನ್ ಇನ್ನು ವಾಹನ ಮೂವ್ ಮಾಡಿಲ್ಲ, ಯಾರಿಗೂ ತಾಗಿಸೋದಿಲ್ಲ ಎಂದು ಹೇಳಿದ್ದಾರೆ.
ಆದರೆ ಬಿಡದೆ ಅವರಿಬ್ಬರು ಈ ಲೋಕಲ್ ಕನ್ನಡಿಗರಿಗೆ ಪಾಠ ಕಲಿಸಬೇಕು ಎಂದು ಮಾತನಾಡಿಕೊಂಡು ಹೊಡೆಯಲು ಮುಂದಾಗಿದ್ದಾರೆ. ಭುವನ್ ಏನೂ ರಿಯಾಕ್ಟ್ ಮಾಡಿಲ್ಲ. ಒಂದೈದು ನಿಮಿಷಕ್ಕೆ ಮೂವತ್ತು ಜನ ನಮ್ಮ ಕಾರ್ ಮುಂದೆ ಜಮಾಯಿಸಿದ್ದರು. ಭುವನ್ ಚಿನ್ನದ ಸರ ಕಿತ್ತುಕೊಳ್ಳಲು ನೋಡಿದರು. ಆದರೆ ನಾವು ಬಿಡಲಿಲ್ಲ. ನಮ್ಮ ಕಾರನ್ನು ಪುಡಿ ಮಾಡಿದ್ದಾರೆ ಎಂದು ಹರ್ಷಿಕಾ ಹೇಳಿದ್ದಾರೆ.
View this post on Instagram