March 15, 2026
Sunday, March 15, 2026
spot_img

ʼಮೆಟ್ರೋ ಪ್ರಯಾಣ ದರ ಏರಿಕೆ ತಡೆಹಿಡಿದಿದ್ದು ನಾವೇ, ಕೇಂದ್ರ ಏನೂ ಮಾಡಿಲ್ಲʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮೆಟ್ರೋ ದರ ಏರಿಕೆಯನ್ನು ತಡೆಹಿಡಿದಿರುವುದು ನಾವೇ, ಕೇಂದ್ರ ಸರ್ಕಾರ ಅಲ್ಲ. ಜನರಿಗೆ ತೊಂದರೆ ಆಗೋದಕ್ಕೆ ಬಿಡುವುದಿಲ್ಲ ಎಂದು ಹೇಳಿದ್ದೆವು. ಅಂತೆಯೇ ನಡೆದುಕೊಳ್ಳುತ್ತಿದ್ದೇವೆ. ಎಲ್ಲ ಎಫರ್ಟ್‌ ನಮ್ಮದೇ ಕೇಂದ್ರ ಏನೂ ಮಾಡಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ದರ ಪರಿಷ್ಕರಣೆಯ ಆಧಾರವನ್ನು ವಿವರಿಸಿದ ಶಿವಕುಮಾರ್, ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಕಾರ್ಯಾಚರಣೆ, ನಿರ್ವಹಣೆ ಮತ್ತು ದುರಸ್ತಿ (ಒಎಂಆರ್) ವೆಚ್ಚಗಳು, ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಹಣದುಬ್ಬರ-ಸಂಬಂಧಿತ ವೆಚ್ಚಗಳು ಮತ್ತು ಇಂಧನ ವೆಚ್ಚಗಳನ್ನು ಗಣನೆಗೆ ತೆಗೆದುಕೊಳ್ಳುವ ಸ್ಥಿರ ಸೂತ್ರವನ್ನು ಅನುಸರಿಸುತ್ತದೆ ಎಂದು ಹೇಳಿದರು.

ಕಳೆದ ವರ್ಷ ಫೆಬ್ರವರಿಯಲ್ಲಿ ಮೆಟ್ರೋ ಏಕಾಏಕಿ ಹೆಚ್ಚು ದರ ಏರಿಕೆ ಮಾಡಿತ್ತು. ಜನರ ಆಕ್ರೋಶಕ್ಕೆ ಕೊಂಚ ದರ ಕಡಿಮೆ ಮಾಡಿತ್ತು. ಇದೀಗ ಮತ್ತೆ ಮೆಟ್ರೋ ದರ ಏರಿಕೆ ಬಗ್ಗೆ ಮಾತನಾಡಿದ್ದು, ಇಂದಿನಿಂದಲೇ ಹೊಸ ದರ ಜಾರಿಗೆ ಬರಲಿದೆ ಎನ್ನಲಾಗಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !