‘ನಿಮ್ಮ ಜೊತೆ ನಾವು ಇದ್ದೇವೆ’: ಸ್ಮೃತಿ ಇರಾನಿಗೆ ಬಾಲಿವುಡ್ ಮಂದಿ ಸಾಥ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಲೋಕಸಭಾ ಚುನಾವಣೆಯಲ್ಲಿ ಸ್ಮೃತಿ ಇರಾನಿ ಅವರು ಸೋಲು ಅನುಭವಿಸಿದ್ದಾರೆ. ಆ ಬಳಿಕ ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಬಿಜೆಪಿ (BJP) ಸಂಸದೆಯಾಗಿ ಇಷ್ಟು ದಿನ ಕೆಲಸ ಮಾಡಿದ್ದ ಸ್ಮೃತಿ ಇರಾನಿ ಅವರು ತಮ್ಮ ಜೊತೆಗಿದ್ದ ಜನರಿಗೆ ಧನ್ಯವಾದ ತಿಳಿಸಿದ್ದಾರೆ. ಈ ಪೋಸ್ಟ್​ಗೆ ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡಿದ್ದಾರೆ.

‘ನಿಮ್ಮ ಜೊತೆ ನಾವು ಇದ್ದೇವೆ’ ಎಂದು ಕಮೆಂಟ್​ ಮಾಡುವ ಮೂಲಕ ಮೌನಿ ರಾಯ್ (Mouni Roy)​, ಸೋನು ಸೂದ್​ ಮುಂತಾದವರು ಬೆಂಬಲ ಸೂಚಿಸಿದ್ದಾರೆ.

‘ಎಂಥ ಬದುಕು.. ಒಂದು ದಶಕದ ಈ ಸಮಯದಲ್ಲಿ ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಹೋಗಿದ್ದು, ಬದುಕುಗಳನ್ನು ಕಟ್ಟಿದ್ದು, ಭರವಸೆಗಳನ್ನು, ಆಕಾಂಕ್ಷೆಗಳನ್ನು ಪೋಷಿಸಿದ್ದು, ಮೂಲ ಸೌಕರ್ಯ ಕಲ್ಪಿಸಲು ಕೆಲಸ ಮಾಡಿದ್ದು, ರಸ್ತೆ, ನಾಲೆ, ಮೆಡಿಕಲ್​ ಕಾಲೇಜ್​ ಹಾಗೂ ಇನ್ನೂ ಇತ್ಯಾದಿ. ನನ್ನ ಸೋಲು ಮತ್ತು ಗೆಲುವಿನಲ್ಲಿ ಜೊತೆಯಾಗಿ ನಿಂತ ಎಲ್ಲರಿಗೂ ನಾನು ಚಿರಋಣಿ. ಇಂದು ಸಂಭ್ರಮಿಸುತ್ತಿರುವವರಿಗೆ ಅಭಿನಂದನೆಗಳು. ಜೋಶ್​ ಹೇಗಿದೆ? ಈಗಲೂ ಹೈ ಆಗಿದೆ ಎನ್ನುತ್ತೇನೆ’ ಎಂದು ಸ್ಮೃತಿ ಇರಾನಿ ಪೋಸ್ಟ್​​ ಮಾಡಿದ್ದಾರೆ.

ಸ್ಮೃತಿ ಇರಾನಿ ಅವರ ಈ ಪೋಸ್ಟ್​ಗೆ ಬಾಲಿವುಡ್​ ನಟಿ ಮೌನಿ ರಾಯ್​ ಪ್ರತಿಕ್ರಿಯಿಸಿದ್ದಾರೆ. ‘ಯಾವಾಗಲೂ ನಿಮ್ಮ ಜೊತೆ ಇರುತ್ತೇವೆ’ ಎಂದುರು ಕಮೆಂಟ್​ ಮಾಡಿದ್ದಾರೆ.

ನಟ ಸೋನು ಸೂದ್​ ಅವರು ಕಮೆಂಟ್​ ಸೆಕ್ಷನ್​ನಲ್ಲಿ ಕೆಂಪು​ ಹಾರ್ಟ್​ ಎಮೋಜಿ ಪೋಸ್ಟ್ ಮಾಡಿದ್ದಾರೆ. ‘ಕಷ್ಟಪಟ್ಟು ಕೆಲಸ ಮಾಡುವುದನ್ನು ಮುಂದುವರಿಸಿ, ಅಷ್ಟೇ’ ಎಂದು ಬಾಲಿವುಡ್​ ನಟಿ ನೀನಾ ಗುಪ್ತಾ ಅವರು ಕಮೆಂಟ್​ ಮಾಡಿದ್ದಾರೆ. ‘ಪ್ರತಿದಿನ ನಿಮ್ಮೊಂದಿಗೆ ಇರುತ್ತೇವೆ. ನೀವು ಒಳ್ಳೆಯ ಕೆಲಸ ಮಾಡುವುದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ’ ಎಂದು ನಟಿ ಆಷ್ಕಾ ಗೊರಾಡಿಯಾ ಅವರು ಕಮೆಂಟ್​ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!