ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಶ್ವಸಂಸ್ಥೆಯ ಸಂಸ್ಥೆಗಳು ಮತ್ತು ಭಾರತ-ಫ್ರಾನ್ಸ್ ನೇತೃತ್ವದ ಅಂತಾರಾಷ್ಟ್ರೀಯ ಸೌರ ಒಕ್ಕೂಟ ಸೇರಿದಂತೆ 60 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಅಮೆರಿಕವನ್ನು ಹಿಂತೆಗೆದುಕೊಂಡಿದ್ದಾರೆ, ಈ ಸಂಸ್ಥೆಗಳು “ಅನಗತ್ಯ” ಮತ್ತು ಅಮೆರಿಕದ ಹಿತಾಸಕ್ತಿಗಳಿಗೆ “ವಿರುದ್ಧ” ಎಂದು ಕರೆದಿದ್ದಾರೆ.
‘ಅಮೆರಿಕದ ಹಿತಾಸಕ್ತಿಗಳಿಗೆ ವಿರುದ್ಧವಾದ ಅಂತಾರಾಷ್ಟ್ರೀಯ ಸಂಸ್ಥೆಗಳು, ಸಮಾವೇಶಗಳು ಮತ್ತು ಒಪ್ಪಂದಗಳಿಂದ ಅಮೆರಿಕವನ್ನು ಹಿಂತೆಗೆದುಕೊಳ್ಳುವುದು’ ಎಂಬ ಮಸೂದೆಗೆ ಟ್ರಂಪ್ ಸಹಿ ಹಾಕಿದ್ದಾರೆ.
ಜಾಗತಿಕ ಹವಾಮಾನ ನೀತಿ, ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದ ಹಲವು ಅಂತಾರಾಷ್ಟ್ರೀಯ ಒಪ್ಪಂದಗಳು ಹಾಗೂ ವಿಶ್ವಸಂಸ್ಥೆಯ 31 ಘಟಕಗಳು ಮತ್ತು ಇತರ 35 ಅಂತಾರಾಷ್ಟ್ರೀಯ ಸಂಘಟನೆಗಳು ಸೇರಿ ಒಟ್ಟು 66 ಸಂಸ್ಥೆಗಳು ಒಳಗೊಂಡ ಒಕ್ಕೂಟದಿಂದ ಹೊರ ನಡೆದಿದೆ.
ಇದನ್ನೂ ಓದಿ: Rice series 13 | ಚಳಿಯ ವಾತಾವರಣಕ್ಕೆ ಬಿಸಿಬಿಸಿ ಪೆಪ್ಪರ್ ರೈಸ್ ಸೂಪರ್ ಕಾಂಬಿನೇಶನ್!
ಅಮೆರಿಕದ ತೆರಿಗೆದಾರರ ಹಣವನ್ನು ದೇಶದ ಆದ್ಯತೆಗಳಿಗೆ ಬಳಸಬೇಕು ಎಂಬ ಕಾರಣ ನೀಡಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
ಕಳೆದ ವರ್ಷ ನಡೆದ ವಿಶ್ವಸಂಸ್ಥೆಯ ಹವಾಮಾನ ಸಮಾವೇಶಕ್ಕೆ ಅಮೆರಿಕ ಗೈರಾಗಿದ್ದು, ಮೂರು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಆಗಿತ್ತು. ಮಹಿಳಾ ಸಬಲೀಕರಣಕ್ಕಾಗಿ ಕಾರ್ಯನಿರ್ವಹಿಸುವ ‘ಯುಎನ್ ವುಮನ್’ ಮತ್ತು ತಾಯಿ–ಮಗು ಆರೋಗ್ಯ, ಕುಟುಂಬ ಯೋಜನೆಗೆ ಸಂಬಂಧಿಸಿದ ಯುಎನ್‌ಎಫ್‌ಪಿಎ ಸಂಸ್ಥೆಯಿಂದಲೂ ಅಮೆರಿಕ ಹೊರಬಂದಿದೆ. ಈ ಸಂಸ್ಥೆಗಳಿಗೆ ನೀಡುತ್ತಿದ್ದ ದೇಣಿಗೆಯನ್ನು ಈಗಾಗಲೇ ಕಡಿತಗೊಳಿಸಲಾಗಿತ್ತು.

