‘ನಮಗೆ ಚೆಕ್ ಬೇಡ, ಪರಿಹಾರವೂ ಬೇಡ ನಮಗೆ ನಮ್ಮ ಮಗಳು ಬೇಕು ಅವಳನ್ನು ತಂದು ಕೊಡಿ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಮಗೆ ಚೆಕ್ ಬೇಡ, ಪರಿಹಾರವೂ ಬೇಡ ನಮಗೆ ನಮ್ಮ ಮಗಳು ಬೇಕು ಅವಳನ್ನು ತಂದು ಕೊಡಿ. ನಾವೇ ನಿಮಗೆ ಬೇಕಾದರೆ ಮನೆ, ಜಮೀನು, ಆಸ್ತಿ ಪಾಸ್ತಿ ಎಲ್ಲವನ್ನೂ ಮಾರಿ ನಿಮಗೆ ಹತ್ತರಷ್ಟು ಹಣ ಕೊಡ್ತೀವಿ ಎಂದು ಜಿಲ್ಲಾಡಳಿತದ ಎದುರು ಕಾಲ್ತುಳಿತ ದುರಂತದಲ್ಲಿ ಮೃತಪಟ್ಟ ಸಹನಾ ತಂದೆ ಸುರೇಶ್ ಕಣ್ಣೀರಿಟ್ಟಿದ್ದಾರೆ.

ನಮಗೆ ಪರಿಹಾರ ಬೇಡ, ನಮಗೆ ನನ್ನ ಮಗಳು ಬೇಕು ಎಂದು ಸಹನಾ ತಂದೆ ಗೋಳಾಡಿದರು. ಆಗ ನೆರೆಹೊರೆಯವರು ಸಮಾಧಾನಪಡಿಸಿದರು. ನಂತರ ಕೋಲಾರ ಜಿಲ್ಲಾಧಿಕಾರಿ, ಮೃತರ ಕುಟುಂಬಸ್ಥರಿಗೆ ಪರಿಹಾರದ ಚೆಕ್ ನೀಡಿದರು.

ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಕೋಲಾರ ಮೂಲದ ಟೆಕ್ಕಿ ಸಹನಾ ಸಾವನ್ನಪ್ಪಿದ್ದರು. ಮೃತರ ಕುಟುಂಬಸ್ಥರಿಗೆ ಸರ್ಕಾರ 25 ಲಕ್ಷ ರೂ. ಪರಿಹಾರ ಘೋಷಿಸಿತ್ತು. ಪರಿಹಾರದ ಚೆಕ್ ವಿತರಿಸಲು ಜಿಲ್ಲಾಧಿಕಾರಿಗಳು, ಕೋಲಾರ ನಗರದ ಎಸ್.ಜಿ.ಲೇಔಟ್‌ಗೆ ತೆರಳಿದ್ದರು. ಈ ವೇಳೆ ಸಹನಾ ತಂದೆ, ಜಿಲ್ಲಾಧಿಕಾರಿಗಳ ಎದುರು ಕಣ್ಣೀರಿಟ್ಟರು. ‘ನಮಗೆ ಪರಿಹಾರದ ಚೆಕ್ ಬೇಡ, ನನಗೆ ನಮ್ಮ ಮಗಳು ಬೇಕು’ ಎಂದು ತಮ್ಮ ನೋವನ್ನು ಹೊರಹಾಕಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!