ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಾವುದಕ್ಕೂ ನಮಗೆ ಭಯ ಇಲ್ಲ, ನಮ್ಮನ್ನು ಹೆದರಿಸುವ ವ್ಯರ್ಥ ಪ್ರಯತ್ನ ಮಾಡಬೇಡಿ, ನಾವು ಎಲ್ಲದಕ್ಕೂ ಸಿದ್ಧ ಎಂದು ಹಮಾಸ್ ಉಗ್ರರು ಇಸ್ರೇಲ್‌ಗೆ ಎಚ್ಚರಿಕೆ ನೀಡಿದ್ದಾರೆ.
ವಾಯುಮಾರ್ಗ, ಸಮುದ್ರ ಹಾಗೂ ನೆಲದ ಮೂಲಕ ಹಮಾಸ್ ಉಗ್ರರ ಮೇಲೆ ದಾಳಿ ನಡೆಸುತ್ತೀವಿ ಎಂದು ಇಸ್ರೇಲ್ ಎಚ್ಚರಿಕೆ ನೀಡಿದ್ದು, ದಾಳಿಗೂ ಮುನ್ನ ಮೂರು ಗಂಟೆಗಳಲ್ಲಿ ನಾಗರಿಕರು ಪಲಾಯನ ಮಾಡುವಂತೆಯೂ ಇಸ್ರೇಲ್ ಸೂಚಿಸಿತ್ತು. ಅಂತೆಯೇ ಮೂರು ಗಂಟೆಯಲ್ಲಿ 10 ಲಕ್ಷ ಮಂದಿ ಪಲಾಯನ ಮಾಡಿದ್ದರು.
ಈ ಬಗ್ಗೆ ಹಮಾಸ್ ಮಿಲಿಟರಿ ವಕ್ತಾರ ಅಬು ಒಬೆಡೆ ನೀವು ಏನಾದರೂ ಮಾತನಾಡಿ, ನಾವು ಯಾವುದಕ್ಕೂ ಹೆದರುವುದಿಲ್ಲ. ಎಲ್ಲಕ್ಕೂ ತಯಾರಾಗಿಯೇ ಬಂದಿದ್ದೇವೆ ಎಂದು ಹೇಳಿದ್ದಾರೆ.
ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ಭಯೋತ್ಪಾದಕ ಸಂಘಟನೆ ಹಮಾಸ್ ನಡುವೆ ಕದನ ಮುಂದುವರಿದಿದ್ದು, ಈವರೆಗೂ ನಾಲ್ಕು ಸಾವಿರ ಮಂದಿ ಮೃತಪಟ್ಟಿದ್ದಾರೆ. ಈಗಾಗಲೇ ಭೀಕರವಾಗಿ ಯುದ್ಧ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.