ಹೊಸದಿಗಂತ ಹುಬ್ಬಳ್ಳಿ:
ಕಾಂಗ್ರೆಸ್ ಸರ್ಕಾರ ಕೇಂದ್ರ ಹಾಗೂ ರಾಜ್ಯದಲ್ಲಿದ್ದಾಗ ಎಷ್ಟು ಭಯೋತ್ಪಾದನ ಚಟುವಟಿಕೆಗಳು ನಡೆಯುತ್ತಿದ್ದವು ಎಂಬುವುದರ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ ಅವರು ನೆನಪು ಮಾಡಿಕೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹರಿಹಾಯ್ದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ವಿದೇಶಿಗರು ನುಸುಳುವುದು ಹಾಗೂ ಭಯೋತ್ಪಾದಕ ಚಟುವಟಿಕೆ ತಡೆಯು ಕೆಲಸ ಬಿಜೆಪಿ ಸರ್ಕಾರ ಮಾಡಿದೆ ಎಂದರು.
ನಿಮ್ಮ ಅಧಿಕಾರ ಅವಧಿಯಲ್ಲಿ ಹೈದರಾಬಾದ್, ಬೆಂಗಳೂರು, ಪುಣೆ, ಮುಂಬೈ ಹಾಗೂ ಹುಬ್ಬಳ್ಳಿಯಲ್ಲಿಯೂ ಸಹ ಬಾಂಬ ಸ್ಪೋಟ್ ದಂತ ಘಟನೆಗಳು ನಡೆದಿವೆ. ಈ ಬಗ್ಗೆ ಬಿಜೆಪಿ ರಾಜಕೀಯ ಮಾಡಿಲ್ಲ. ನೀವೊಬ್ಬ ಸಜ್ಜನ ರಾಜಕಾರಣಿ, ದೇಶದ ಹಾಗೂ ರಾಜ್ಯದ ಬಗ್ಗೆ ಅಪಾರ ಕಳಕಳಿ ಇರುವ ವ್ಯಕ್ತಿ ಎಂದು ಭಾವಿಸಿದ್ದೇವೆ. ಆದರೆ ನೀವು ಚಿಲ್ಲರೆ, ಬೇಜವಾಬ್ದಾರಿ ಹಾಗೂ ರಾಹುಲ್ ಗಾಂಧಿ ಅವರಂತೆ ಮಾತನಾಡುವುದು ಬಿಡಬೇಕು ಎಂದು ತಿಳಿಸಿದರು.
ಪ್ರಕರಣ ದಾಖಲಾದರವು ರಾಜೀನಾಮೆ ನೀಡಬೇಕು ಎಂಬ ಶಾಸಕ ಜಿ.ಟಿ. ದೇವೇಗೌಡರ ಹೇಳಿಕೆ ಬಿಜೆಪಿಗೆ ಯಾವುದೇ ಹಾನಿ ಇಲ್ಲ. ಇಷ್ಟು ದಿನ ಸಿದ್ದರಾಮಯ್ಯ ಹಾಗೂ ಸರ್ಕಾರ ವಿರುದ್ಧ ಮಾತನಾಡಿದ್ದರು. ಸದ್ಯ ಕೆಲವು ರಾಜಕಾರಣಿಗಳು ಅಧಿಕಾರ, ಅಂತಸ್ತು ಹಾಗೂ ಸ್ಥಾನಮಾನದ ಸಿಗಲಿಲ್ಲ ಅಂದರೆ ಪಕ್ಷ ವಿರುದ್ಧ ಮಾತನಾಡುವುದು ಸಹಜವಾಗಿದೆ ಎಂದರು.
ಪ್ರತಿಯೊಂದು ಪಕ್ಷಕ್ಕೂ ತನ್ನದೇಯಾದ ಸಿದ್ಧಾಂತ ಹಾಗೂ ವಿಚಾರಧಾರೆ ಇರುತ್ತದೆ. ಅದನ್ನು ಬಿಟ್ಟು ಪಕ್ಷದ ವಿರುದ್ಧ ಯಾರು ಮಾತನಾಡಬಾರದು. ಜೆಡಿಎಸ್ ನಲ್ಲಿ ನಡೆದಿರುವ ಘಟನೆಗಳ ಬಗ್ಗೆ ಅವರು ನೋಡಿಕೊಳ್ಳಬೇಕು. ಅದು ಆ ಪಕ್ಷದ ಆಂತರಿಕ ವಿಚಾರವಾಗಿದೆ. ಆದರೆ ಮುಡಾ ಹಾಗೂ ವಾಲ್ಮೀಕಿ ಪ್ರಮುಖ ಪ್ರಕರಣಗಳ ಬಗ್ಗೆ ಅವರು ಹೇಳಿರುವುದು ಸರಿಯಲ್ಲ ಎಂದರು.