ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಪಾಕಿಸ್ತಾನದ ನಡುವಿನ ಪರಮಾಣು ಸಂಘರ್ಷವನ್ನು ನಾವು ತಡೆದಿದ್ದೇವೆ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಶ್ವೇತಭವನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಟ್ರಂಪ್ , ಅದು ಕೆಟ್ಟ ಪರಮಾಣು ಯುದ್ಧವಾಗಿರುತ್ತಿತ್ತು ಎಂದು ನಾನು ಭಾವಿಸುತ್ತೇನೆ. ಪರಮಾಣು ಯುದ್ದ ನಡೆದ್ರೆ ಲಕ್ಷಾಂತರ ಜನರು ಕೊಲ್ಲಲ್ಪಡುತ್ತಿದ್ದರು. ಇಂತಹ ಪರಮಾಣು ಯುದ್ಧವನ್ನು ನಾವು ನಿಲ್ಲಿಸಿದ್ದೇವೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಶಮನ ಮಾಡುವಲ್ಲಿ ನಿರತರಾದ ಉಪರಾಷ್ಟ್ರಪತಿ ಜೆಡಿ ವ್ಯಾನ್ಸ್ ಮತ್ತು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಕದನ ವಿರಾಮ ಒಪ್ಪಂದದ ನಂತರ ಭಾರತ ಮತ್ತು ಪಾಕಿಸ್ತಾನಕ್ಕೆ ಸಹಾಯ ಮಾಡಲು ಅಮೆರಿಕ ಸಿದ್ಧ. ಉಭಯ ದೇಶಗಳು ಕದನ ವಿರಾಮ ಘೋಷಿಸಿದ್ರೆ ಮಾತ್ರವೇ ವ್ಯಾಪಾರ ಮುಂದುವರೆಯಲಿದೆ. ಕದನ ವಿರಾಮ ಘೋಷಿಸಿದ್ರೇ ವ್ಯಾಪಾರ ಮಾಡುತ್ತೇವೆ ಅಂತ ಹೇಳಿದ್ದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದಾರೆ.