ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಚುನಾವಣೆಯಲ್ಲಿ ಬಹಳಷ್ಟು ಕಡೆ ನಾವು ಸೋತಿದ್ದೇವೆ. ಸೋಲಿನ ವಿಶ್ಲೇಷಣೆ ಆತ್ಮಾವಲೋಕನ ಮಾಡಬೇಕಿದ್ದು, ಯಾಕೆ ಸೋತಿದ್ದೇವೆ, ಎಲ್ಲಿ ಎಡವಿದ್ದೇವೆ ಎಂಬೂದು ಚರ್ಚೆಯಾಗಬೇಕಿದೆ. ಸಿಎಂ, ಅಧ್ಯಕ್ಷ ಡಿಕೆಶಿ ಹಾಗು ನಾನು ಈ ಬಗ್ಗೆ ಚರ್ಚೆ ಮಾಡಿದ್ದೇವೆ. ಸಮಿತಿ ರಚನೆ ಮಾಡಿ, ಹಿರಿಯರು ಅನುಭವಿಗಳ ವಿಶ್ಲೇಷಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ಗೃಹಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜನಸಾಮಾನ್ಯರ ಬಡತನ ನಿರ್ಮೂಲನೆಗೆ ಗ್ಯಾರೆಂಟಿ ಯೋಜನೆ ಜಾರಿಗೆ ತಂದಿದ್ದೆವು, ಜನಕ್ಕೆ ಗ್ಯಾರೆಂಟಿ ತಲುಪಿದೆ, ಎಲ್ಲಾ ಯೋಜನೆ ಅನುಷ್ಠಾನ ಆಗಿದೆ. ರಾಜಕೀಯಕ್ಕೆ ಗ್ಯಾರೆಂಟಿ ಲಾಭ ಆಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಗ್ಯಾರೆಂಟಿ ಯೋಜನೆ ನಿಲ್ಲಿಸೋದಿಲ್ಲ. ಗ್ಯಾರೆಂಟಿ ರಾಜಕೀಯ ಉದ್ದೇಶಕ್ಕಲ್ಲ. ಪಟ್ಟಣ ಪ್ರದೇಶದಲ್ಲಿ ಗ್ಯಾರೆಂಟಿ ಅವಶ್ಯಕತೆ ಇದೆಯೋ ಇಲ್ಲವೋ ಗೊತ್ತಿಲ್ಲ, ಹಳ್ಳಿ, ಗ್ರಾಮೀಣ ಭಾಗದ ಜನಕ್ಕೆ ಈ ಯೋಜನೆ ಉಪಯೋಗವಾಗುತ್ತಿದೆ. ಗ್ಯಾರೆಂಟಿ ಜೊತೆ ಅಭಿವೃದ್ಧಿ ಕಾರ್ಯ ಕೂಡಾ ಮಾಡುತ್ತೇವೆ. ರಾಜ್ಯದ ಬಜೆಟ್ ಗಾತ್ರ ಹೀಗ್ಗಿದ್ದು, ಅಭಿವೃದ್ಧಿಗೆ ಹಣಕಾಸು ವ್ಯವಸ್ಥೆ ಇದೆ. ಹಣಕಾಸು ಮತ್ತು ವಿವಿಧ ಕಾರ್ಯಕ್ರಮಗಳಿಗೆ ಯಾವುದೇ ತೊಂದರೆ ಇಲ್ಲ ಎಂದವರು ತಿಳಿಸಿದರು.
ಎನ್‌ಡಿಎ ಗೆ 400 ಸೀಟ್ ಬರುತ್ತದೆ ಎಂದದವರು ನಿರೀಕ್ಷಿಸಿದ್ದರು. ಜನ ಬಿಜೆಪಿ ಹಾಗು ಎನ್.ಡಿ.ಎ ಯನ್ನು ತಿರಸ್ಕರಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಹಿಂದಿನ ಚುನಾವಣೆಗಿಂತ ಈ ಬಾರಿ ರಾಜ್ಯ ಮತ್ತು ರಾಷ್ಟ್ರದಲ್ಲಿ ಕಾಂಗ್ರೆಸ್ ನ ವೋಟ್ ಶೇರ್ ಹೆಚ್ಚಾಗಿದೆ. ಬಿಜೆಪಿಯವರು ನಿರೀಕ್ಷೆ ತಲುಪಿಲ್ಲ, ನಾವು ನಮ್ಮ ನಿರೀಕ್ಷೆಗೂ ತಲುಪಿಲ್ಲ. ಕಾಂಗ್ರೆಸ್ ಸ್ವಲ್ಪ ಫೈನ್ ಟ್ಯೂನಿಂಗ್ ಮಾಡಿಕೊಳ್ಳಬೇಕಾಗುತ್ತದೆ ಮುಂದಿನ ದಿನದಲ್ಲಿ ಮಾಡುತ್ತೇವೆ ಎಂದವರು ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಗೆ ಡಿಬ್ಯಾಕ್ ಆಗಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಾವ ಡಿ ಬ್ಯಾಕ್ ? ಕಾಂಗ್ರೆಸ್ ಗೆ ಎಲ್ಲಿ ಡಿಬ್ಯಾಕ್ ಆಗಿದೆ. ಯಾರು ಹೀಗೇ ಹೇಳಿದ್ದಾರೆ. ನಾವು ಒಂದರಿಂದ 9 ಸೀಟುಗಳನ್ನು ತಲುಪಿದ್ದೇವೆ. ಮಾಧ್ಯಮದ ವಿಶ್ಲೇಷಣೆ ಇರಬಹುದು ನಮಗೆ ಡಿ ಬ್ಯಾಕಲ್ ಆಗಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ 20 ರಿಂದ 28 ಗೆಲ್ಲಬೇಕು ಎಂಬ ನಿರೀಕ್ಷೆ ಇತ್ತು. ನರೇಂದ್ರ ಮೋದಿ ಅವರಿಗೆ ಹಿನ್ನಡೆ ಆಗಲಿಲ್ಲವೇ?ಬರೀ ನಮ್ಮ ಬಗ್ಗೆ ಯಾಕೆ ಹೇಳುತ್ತೀರಿ ಅವರ ಬಗ್ಗೆ ಮಾತಾಡಿ, ಬಿಜೆಪಿಗೆ 240 ಸೀಟು ಅಂದ್ರೆ ಹಿನ್ನಡೆ ಅಲ್ವಾ? ಎಂದು ಪ್ರಶ್ನಿಸಿದರು.